ಜಿಲ್ಲೆ

ವಿದ್ಯುತ್ ವ್ಯತ್ಯಯ ನಾಳೆ

Kopala - Desk - Eraveni

ತಾವರಗೇರಾ: ಜೆಸ್ಕಾಂ ಇಲಾಖೆ ವಿದ್ಯುತ್ ವಿತರಣಾ 11 ಕೆವಿ ಫೀಡರ್ ಕೇಂದ್ರದ ಗ್ರಾಮಗಳ ವಿದ್ಯುತ್ ಸರಬರಾಜು ದಿ.09 ಗುರುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.

ಕೇಂದ್ರದ 33 ಕೆವಿ ಕೇಂದ್ರದ 11 ಕೆವಿ ಫೀಡರ್ ವ್ಯಾಪ್ತಿಯ ನವಲಹಳ್ಳಿ, ಜುಮಲಾಪೂರ, ಮೆಣೇಧಾಳ ಹಾಗೂ ಹುಲಿಯಾಪೂರ ಫೀಡರ್ ವ್ಯಾಪ್ತಿಯ ಗ್ರಾಮಗಳಲ್ಲಿ 11 ಫೀಢರ್‌ಗಳ ನಿರ್ವಹಣೆ ಮತ್ತು ವೀಣಾ ಏನರ್ಜಿ ವಿಂಡ್ ಪವರ್ ಲಿಮಿಟೆಡ್ ಸಂಬಂಧಿಸಿದ ಕಾರ್ಯನಿರ್ವಹಣೆ,

ಕಂಬಗಳ ಸ್ಥಳಾಂತರ ಕಾರ್ಯ ನಡೆಯಲಿದೆ. ಕಾರಣ ಈ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಸಾರ್ವಜನಿಕರು ಸಹಕರಿಸಬೇಕೆಂದು ಕುಷ್ಟಗಿ ಜೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಮತ್ತು ತಾವರಗೇರಾ ಪಟ್ಟಣದ ಜೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.