ಕೊಟ್ಟೂರಿನಲ್ಲಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಯಿಂದ ಜೆಸ್ಕಾಂ ಇಲಾಖೆ ಎಇಇ ಪ್ರಕಾಶ ಪತ್ತೇನೂರುಗೆ ಗುರುವಾರ ಮನವಿ ಸಲ್ಲಿಸಲಾಯಿತು. ರೈತರಾದ ಎ.ಸಿದ್ದಪ್ಪ. ಕೆ. ನಾಗರಾಜ. ಪಾಲಾಕ್ಷಪ್ಪ. ಪಿ. ಗಂಗಾಧರ. ಎಸ್. ಸಿದ್ದಪ್ಪ, ರುದ್ರೇಶ ಎ, ಜನಾರ್ಧನ. ಬಿ. ಮಂಜುನಾಥ, ರಘುಪತಿ, ಪಿ.ಎಂ. ಕೊಟ್ರಯ್ಯ ಇತರರಿದ್ದರು. 
ಜಿಲ್ಲೆ

ವಿದ್ಯುತ್ ಕಣ್ಣಾಮುಚ್ಚಾಲೆಗೆ ಆಕ್ರೋಶ

ರುದ್ರಪ್ಪ ವಾಲಿ

ಕೊಟ್ಟೂರು: ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು ಬೇಸತ್ತು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒಡಗೂಡಿ ಇಲ್ಲಿನ ಜೆಸ್ಕಾಂ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಆಕ್ರೋಶ

ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಭರಮಪ್ಪ ಹಾಗೂ ವಾಸುದೇವ ಮೇಟಿ ಬಣದ ವಿಜಯನಗರ ಜಿಲ್ಲಾ ಉಪಾಧ್ಯಕ್ಷ ಜಂಬೂರು ಮರುಳಸಿದ್ದಪ್ಪ ಮಾತನಾಡಿ, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ರೈತರ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋದರೆ 24 ತಾಸುಗಳಲ್ಲಿ ಜೆಸ್ಕಾಂ ಇಲಾಖೆ ಸಿದ್ದಪಡಿಸಿಕೊಡುವ ಕಾನೂನು ಇದ್ದರೂ ಇಂದಿನ ತನಕ ಯಾವೊಬ್ಬ ರೈತನ ಸುಟ್ಟ ಟ್ರಾನ್ಸ್‌ಫಾರ್ಮರ್ ಸಿದ್ದಪಡಿಸಿಕೊಟ್ಟಿಲ್ಲ. ರೈತರು ಸ್ವಂತ ಹಣದಲ್ಲಿ ಸಿದ್ದಪಡಿಸಿಕೊಳ್ಳುತ್ತಿದ್ದಾರೆ. ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗದ ಕಾರಣ ಬೆಳೆಗಳಿಗೆ ನೀರು ಹಾಯಿಸಲು ಆಗುತ್ತಿಲ್ಲ, ಇದರಿಂದ ಬೆಳೆಗಳು ಒಣಗುತ್ತಿವೆ. ಆದ್ದರಿಂದ ರೈತರಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.

ರೈತರ ಮನವಿ ಸ್ವೀಕರಿಸಿದ ಜೆಸ್ಕಾಂ ಇಲಾಖೆ ಎಇಇ ಪ್ರಕಾಶ ಪತ್ತೇನೂರು. ಮಳೆ ಅಭಾವದಿಂದ ಹೆಚ್ಚು ಪ್ರಮಾಣದಲ್ಲಿ ಕರೆಂಟ್ ಕೊಡಲಾಗುತ್ತಿಲ್ಲ. ಮಳೆ ಬಂದರೆ ಈ ಸಮಸ್ಯೆ ಬಗೆಹರಿಯಲಿದೆ. ಫೀಡರ್‌ಗಳು ಹಾಗೂ ವಿದ್ಯುತ್ ಕೇಂದ್ರಗಳು ಓವರ್ ಲೋಡ್ ಆಗಿವೆ. ಅಲ್ಲದೆ ಕೊಟ್ಟೂರು ವಿದ್ಯುತ್ ಕೇಂದ್ರದಲ್ಲಿ ಹೆಚ್ಚುವರಿ 12.5 ಎಂ.ಇ.ಎ. ಟ್ರಾನ್ಸ್‌ಫಾರ್ಮರ್ ಕೂಡಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ.

ತಿಮ್ಮಲಾಪುರದಲ್ಲಿ ವಿದ್ಯುತ್ ಕೇಂದ್ರ ನಿರ್ಮಾಣಕ್ಕೆ ಎಲ್ಲ ಸಿದ್ಧತೆಗಳಾಗಿವೆ. ಈ ಎಲ್ಲವೂ ಆದರೆ ಈ ಭಾಗದಲ್ಲಿ ಕರೆಂಟ್ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದರು.