More

    ನೀರಾವರಿ ಎಂದು ಪರಿಗಣಿಸಿ ಪರಿಹಾರ ನೀಡಿ; ಸಂಸದ ಕರಡಿ ಸಂಗಣ್ಣಗೆ ರೈತರ ಮನವಿ

    ಮಸ್ಕಿ: ರಸ್ತೆ ನಿರ್ಮಾಣಕ್ಕಾಗಿ ಭೂಮಿ ವಶಪಡಿಸಿಕೊಳ್ಳುವ ಕೇಂದ್ರ ಸರ್ಕಾರ ತಾಲೂಕಿನ 20 ಗ್ರಾಮಗಳ ರೈತರ ಜಮೀನುಗಳಿಗೆ ಸರಿಯಾದ ಮೌಲ್ಯ ನಿರ್ಧರಿಸಬೇಕು ಎಂದು ಒತ್ತಾಯಿಸಿ ರೈತರು ಸಂಸದ ಕರಡಿ ಸಂಗಣ್ಣ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

    ಪಟ್ಟಣದ ಭ್ರಮರಾಂಬಾ ದೇವಸ್ಥಾನದಲ್ಲಿ ಸೇರಿದ್ದ ಸಭೆಗೆ ಆಗಮಿಸಿದ ಸಂಸದರ ಬಳಿ ರೈತರು ಅಳಲು ತೋಡಿಕೊಂಡರು.

    ರೈತರ ಪರವಾಗಿ ಬಸವಂತರಾಯ ಕುರಿ ಮಾತನಾಡಿ, ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಭಾರತಮಾಲ ಯೋಜನೆಯ ನಾಲ್ಕುಪಥದ ರಾಷ್ಟ್ರೀಯ ಹೆದ್ದಾರಿ 748-ಎ ಪಣಜಿ-ಹೈದರಾಬಾದ್ ಮಾರ್ಗದ ರಸ್ತೆ ಸಂತೆಕೆಲ್ಲೂರು ಮಾರ್ಗವಾಗಿ ಸಾಗಲಿದೆ. ಈ ಭಾಗದಲ್ಲಿ 20ಹಳ್ಳಿಗಳ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿದ್ದು, 2017ರಲ್ಲಿಯೇ ಈ ಭೂಮಿ ನಂದವಾಡಗಿ ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಒಳಪಡುತ್ತಿದೆ. ನಮ್ಮ ಜಮೀನಿನ ಪಹಣಿಯಲ್ಲಿ ನೀರಾವರಿ ಎಂದು ನಮೂದಾಗಬೇಕಾಗಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ಪಹಣಿಯಲ್ಲಿ ಖುಷ್ಕಿ ಜಮೀನು ಎಂದಿದೆ. 2021-22ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಸ್ವಾಧೀನ ಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದಾರೆ. ಹೀಗಾಗಿ ಖುಷ್ಕಿ ಭೂಮಿಗೆ ಪರಿಹಾರ ಮೊತ್ತ ಅತ್ಯಲ್ಪವಾಗುತ್ತಿದ್ದು, ನೀರಾವರಿ ಭೂಮಿಯನ್ನು ಕಳೆದುಕೊಳ್ಳುವ ರೈತರಿಗೆ ಮೌಲ್ಯ ವರ್ಧಿತ ಬೆಲೆ ಕೊಡುವಂತೆ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಸೂಚಿಸಬೇಕು. ಇಲ್ಲದಿದ್ದಲ್ಲಿ ರಸ್ತೆ ಕಾಮಗಾರಿಗೆ ನಡೆಸಲು ಬಿಡುವುದಿಲ್ಲ. ಹೋರಾಟದ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಸಂಸದ ಕರಡಿ ಸಂಗಣ್ಣ ಮಾತನಾಡಿ, ರಾಯಚೂರು ಸಂಸದ ರಾಜ ಅಮರೇಶ್ವರ ನಾಯಕ ಜತೆ ಚರ್ಚೆ ಮಾಡಿ ಜಿಲ್ಲಾಧಿಕಾರಿ ಮತ್ತು ಬಾಗಲಕೋಟೆಯ ಭೂಸ್ವಾಧೀನ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

    ಸಭೆಯಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಶಂಕರಗೌಡ ಚಿಕ್ಕಹೆಸರೂರು, ರಮೇಶ ಶಾಸ್ತ್ರಿ, ಶರಣಗೌಡ ಬಸಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts