ಅಪಘಾತಕ್ಕೀಡಾಗಿದ್ದ ಕಾರು 
ಜಿಲ್ಲೆ

ಕಾರು ಡಿಕ್ಕಿ ಹೊಡೆದು ಮುರಿದ ವಿದ್ಯುತ್​ ಕಂಬ; ಚಾಲಕ ಸತ್ತರೂ ನಷ್ಟ ಭರಿಸುವಂತೆ ದೂರು ದಾಖಲು!

Webdesk - Ravikanth

ದಾವಣಗೆರೆ: ಎಲೆಕ್ಟ್ರಿಕ್​ ಕಂಟ್ರ್ಯಾಕ್ಟರ್​ ಒಬ್ಬರ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದು ಮುರಿದು ಹೋಗಿದ್ದು, ತುಂಡಾಗಿರುವ ವಿದ್ಯುತ್ ಕಂಬದ ನಷ್ಟ ಭರಿಸುವಂತೆ ಅಪಘಾತದಲ್ಲಿ ಮೃತಪಟ್ಟಿರುವ ಚಾಲಕನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ದಾವಣಗೆರೆ ಜಿಲ್ಲೆಯ ಜಗಳೂರು-ಹಿರೇಮಲ್ಲನಹೊಳೆ ರಸ್ತೆಯ ಸಿದ್ದಮ್ಮನಹಳ್ಳಿ ಕ್ರಾಸ್ ಬಳಿ ಮೂರು ದಿನಗಳ ಹಿಂದೆ ಈ ಅಪಘಾತ ಸಂಭವಿಸಿತ್ತು. ಕಾರು ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಜಗಳೂರು‌ ನಿವಾಸಿ ಎಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಚಾಂದ್​ ಪೀರ್ (32) ಮೃತಪಟ್ಟಿದ್ದರು.

ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ತುಂಡಾದ್ದರಿಂದ ಅದರ ನಷ್ಟ ಭರಿಸಿಕೊಡುವಂತೆ ಬೆಸ್ಕಾಂ ಕಿರಿಯ ಇಂಜಿನಿಯರ್ ರಂಗನಾಥ ಎಂಬವರು ಈ ದೂರನ್ನು ದಾಖಲಿಸಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇಸ್​ ಕುರಿತ ಮುಂದಿನ ಕ್ರಮ ಕುತೂಹಲ ಮೂಡಿಸಿದೆ.