ಬೆಥನಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಸಂಸತ್ತಿಗೆ ಚುನಾವಣೆ ನಡೆಯಿತು. 
ಜಿಲ್ಲೆ

ನೆಲ್ಯಾಡಿ ಬೆಥನಿ ಕಾಲೇಜಿನಲ್ಲಿ ಚುನಾವಣೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ನೆಲ್ಯಾಡಿ

ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ ಕಾಲೇಜಿನ ಶಾಲಾ ಮಂತ್ರಿಮಂಡಲದ ಚುನಾವಣೆ, ಪ್ರಜಾಪ್ರಭುತ್ವ ಮತದಾನದ ಮಾದರಿಯಲ್ಲಿ ನಡೆಯಿತು. ಚುನಾವಣಾ ಪ್ರಕ್ರಿಯೆಯನ್ನು ಬೆಥನಿ ಐಟಿಐ ಸಂಸ್ಥೆಯ ಶಿಕ್ಷಕ ಸುನೀಲ್ ಅವರ ನೇತೃತ್ವದಲ್ಲಿ ಐಟಿಐ ವಿದ್ಯಾರ್ಥಿಗಳು ನೆರವೇರಿಸಿದರು.

ಚುನಾವಣಾಧಿಕಾರಿಗಳಾಗಿ ಶಿಕ್ಷಕರು ಕರ್ತವ್ಯ ನಿರ್ವಹಿಸಿದರು. ಶಾಲಾ ಪ್ರಧಾನಮಂತ್ರಿಯಾಗಿ ರಿಸ್ಟನ್ ರಾಯ್, ಉಪಪ್ರಧಾನಿಯಾಗಿ ಏಂಜಲ್ ಕೆ.ಪಿ, ಪ್ರತಿಪಕ್ಷ ನಾಯಕರಾಗಿ ಅಶುರ ಮತ್ತು ಫಾತಿಮತ್ ಆಪ್ನ ಆಯ್ಕೆಯಾದರು. ಗೃಹಮಂತ್ರಿಯಾಗಿ ಅಲೆನ್ ಶಿಬು ಜಾನ್, ವಿದ್ಯಾಮಂತ್ರಿಯಾಗಿ ಲಲಿತ ವಿ.ಡಿ, ಸಂವಹನ ಮಂತ್ರಿಯಾಗಿ ಸೋನಾ ಮರಿಯ, ಸಾಂಸ್ಕೃತಿಕ ಮಂತ್ರಿಯಾಗಿ ಕ್ಷಿತಿ ಜೈನ್, ಸಂಸದೀಯ ಮಂತ್ರಿಯಾಗಿ ಜೋಯೆಲ್ ಪಿ.ಜೆ, ಕ್ರೀಡಾ ಮಂತ್ರಿಯಾಗಿ ಆಶಿಸ್ ಬೋಸ್, ಆರೋಗ್ಯ ಮಂತ್ರಿಯಾಗಿ ಶಿಫಾ ಎಸ್, ಹಾಗೂ ಉಪಮಂತ್ರಿಗಳಾಗಿ ಅಬ್ದುಯಿಲ್, ತೋಮಸ್, ಆಲ್ವಿನ್ ಜಾರ್ಜ್, ಸ್ಪಿತಿನ್ ವಿನೋದ್, ಸೆಲ್ಮ ಪಿ.ಜೆ, ಬಿಬಿನ್ ಜೋಸೆಫ್, ಬಿಲಾಲ್ ಹಾಗೂ ಸೃಜನಾ ದಾಂಬ್ಲೆ ಆಯ್ಕೆಯಾದರು.

ವಿಜೇತರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಚಾಲಕ ಜೈಸನ್ ಸೈಮನ್ ಒಐಸಿ ಶುಭ ಹಾರೈಸಿದರು.