ಪುತ್ತೂರು ಗ್ರಾಮಾಂತರ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಪಾಣಾಜೆ ಘಟಕ, ತೂಂಬಡ್ಕದ ತುಳುನಾಡು ಫ್ರೆಂಡ್ಸ್ ಮತ್ತು ಭರಣ್ಯದ ಓಂ ಫ್ರೆಂಡ್ಸ್ ಸಂಘಟನೆ, ಗ್ರಾಮಸ್ಥರ ಸಹಕಾರದೊಂದಿಗೆ ಪಾಣಾಜೆ ಗ್ರಾಮದಲ್ಲಿ ತೀರಾ ಹದಗೆಟ್ಟಿದ್ದ ರಸ್ತೆಯ ಹೊಂಡಗಳನ್ನು ಮುಚ್ಚಿ ದುರಸ್ತಿಗೊಳಿಸಿದರು.
ಪಾಣಾಜೆ ಗ್ರಾಮದ ರಣಮಂಗಳ ದೇವಸ್ಥಾನಕ್ಕೆ ಹೋಗುವ ಮತ್ತು ಪಾಣಾಜೆ ಗ್ರಾಮದ ಮೂರು ಮತ್ತು ನಾಲ್ಕನೇ ವಾರ್ಡಿನಲ್ಲಿ ಹಾದು ಹೋಗುವ ಪ್ರಧಾನ ಸಂಪರ್ಕ ರಸ್ತೆಯಲ್ಲಿ ಹೊಂಡಗುಂಡಿಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಪುತ್ತಿಲ ಸೇವಾ ಟ್ರಸ್ಟ್‌ನ ಪಾಣಾಜೆ ಘಟಕದ ಅಧ್ಯಕ್ಷ ರಮೇಶ್ ಭಟ್ ಬೊಲ್ಲುಕಲ್ಲು ಹಾಗೂ ಪ್ರವೀಣ್ ರೈ ಕೋಟೆ ಶ್ರಮದಾನದಲ್ಲಿ ಪಾಲ್ಗೊಂಡವರಿಗೆ ಉಪಾಹಾರ ಮತ್ತು ತಂಪು ಪಾನೀಯದ ವ್ಯವಸ್ಥೆ ಮಾಡಿದ್ದರು.