ಹೆಬ್ರಿ: ಗ್ರಾಮಸ್ಥರ ಭಾಗವಹಿಸುವಿಕೆ ಇನ್ನೂ ಹೆಚ್ಚಾಗಬೇಕು. ಗ್ರಾಪಂ ಸರ್ವತೋಮುಖ ಅಭಿವೃದ್ಧಿಯಲ್ಲಿ ಗ್ರಾಮಸ್ಥರು ಸದಾ ಪಾಲ್ಗೊಳ್ಳುವ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸುಕೊಳ್ಳುವಂತೆ ಮುದ್ರಾಡಿ ಗ್ರಾಪಂಯನ್ನು ಅಭಿವೃದ್ಧಿಪಡಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಬಿ.ವಿ. ಹೇಳಿದರು.
ಮುದ್ರಾಡಿ ಗ್ರಾಪಂ ಸಭಾಂಗಣದಲ್ಲಿ ಬುಧವಾರ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಪಂ 2023-24ನೇ ಸಾಲಿನ ಜಮಾಬಂದಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ವಸಂತಿ ಪೂಜಾರಿ, ಉಪಾಧ್ಯಕ್ಷೆ ರಮ್ಯಾ ಕಾಂತಿ, ಸದಸ್ಯರು, ಜಮಾಬಂದಿ ಸಹಾಯಕ ಸಿಬ್ಬಂದಿಯಾಗಿ ಮಡಾಮಕ್ಕಿ ಗ್ರಾಪಂ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ, ಹೆಬ್ರಿ ಗ್ರಾಪಂ ಲೆಕ್ಕಸಹಾಯಕಿ ಪ್ರತಿಭಾ, ಸಿಬ್ಬಂದಿ ವರ್ಗ ಹಾಗೂ ಸಮುದಾಯ ಆರೋಗ್ಯ ಅಧಿಕಾರಿ, ಆಶಾ ಕಾರ್ಯಕರ್ತೆಯರು, ಓಂಶಕ್ತಿ ಸಂಜೀವಿನಿ ಒಕ್ಕೂಟ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಸಿಬ್ಬಂದಿ ಪದ್ಮನಾಭ ಆರ್.ಕುಲಾಲ್ ನಿರೂಪಿಸಿ, ವರದಿ ವಾಚಿಸಿದರು. ಪಿಡಿಒ ಅಮೃತಾ ಕುಲಾಲ್ ಸ್ವಾಗತಿಸಿ, ಕಾರ್ಯದರ್ಶಿ ಶೋಭಾವತಿ ಶೆಟ್ಟಿ ವಂದಿಸಿದರು.