ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ಆಡಳಿತದ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ, ಶ್ರೀ ವೇದವ್ಯಾಸ ವಿದ್ಯಾಲಯದ ಶಿಕ್ಷಕರಿಗಾಗಿ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.
ರಾಷ್ಟ್ರೀಯ ತರಬೇತುದಾರರಾದ ಬೆಂಗಳೂರಿನ ವೆಂಕಟೇಶ್ ಶರ್ಮಾ, ಸಂಗೀತಾ ಶ್ರೀನಿವಾಸ್ ಎರಡೂ ಸಂಸ್ಥೆ ಶಿಕ್ಷಕ ವೃಂದದವರಿಗೆ ಶೈಕ್ಷಣಿಕ ತರಬೇತಿ ನೀಡಿದರು.
ಸಂಸ್ಥೆ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮಾ ಪಿ. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಕರು ಹೊಸ ವಿಷಯ ತಿಳಿಯುತ್ತಾ ಮಾದರಿ ಶಿಕ್ಷಕರು ಆಗಬೇಕಾದರೆ ಇಂತಹ ತರಬೇತಿ ಅಗತ್ಯ ಎಂದರು.
ಶಾಲಾ ಶಿಕ್ಷಕರಿಗೆ ರಾಷ್ಟ್ರೀಯ ತರಬೇತುದಾರರು 21ನೇ ಶತಮಾನದ ಕೌಶಲ ಎಂಬ ವಿಷಯದಲ್ಲಿ ತರಬೇತಿ ನೀಡಿದರು. ಪ್ರೌಢ ಶಾಲಾ ಮುಖ್ಯಶಿಕ್ಷಕ ಸತ್ಯಶಂಕರ ಭಟ್ ಸ್ವಾಗತಿಸಿದರು. ವೇದವ್ಯಾಸ ವಿದ್ಯಾಲಯ ಮುಖ್ಯಶಿಕ್ಷಕ ಪ್ರಶಾಂತ್ ಬಿ ವಂದಿಸಿದರು. ಶಿಕ್ಷಕ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.