ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯ ಮಠ ಎಜ್ಯುಕೇಶನ್ ಸೊಸೈಟಿ ಆಡಳಿತದ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಮತ್ತು ಶ್ರೀ ವೇದವ್ಯಾಸ ವಿದ್ಯಾಲಯದ ಶಿಕ್ಷಕರಿಗಾಗಿ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ತರಬೇತುದಾರ ಬೆಂಗಳೂರಿನ ವೆಂಕಟೇಶ್ ಶರ್ವಾ ಹಾಗೂ ಸಂಗೀತಾ ಶ್ರೀನಿವಾಸ್ ಎರಡೂ ಸಂಸ್ಥೆಯ ಶಿಕ್ಷಕ ವೃಂದದವರಿಗೆ ಶೈಕ್ಷಣಿಕ ತರಬೇತಿ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ ಪಿ.ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಿಕ್ಷಕರು ಹೊಸ ಹೊಸ ವಿಷಯಗಳನ್ನು ತಿಳಿಯುತ್ತಾ ಮಾದರಿ ಶಿಕ್ಷಕರಾಗಬೇಕಾದರೆ ಇಂತಹ ತರಬೇತಿಗಳು ಅಗತ್ಯ ಎಂದರು. ಶಾಲಾ ಶಿಕ್ಷಕರಿಗೆ ರಾಷ್ಟ್ರೀಯ ತರಬೇತುದಾರರು 21ನೇ ಶತಮಾನದ ಕೌಶಲಗಳು ಎಂಬ ವಿಷಯದಲ್ಲಿ ತರಬೇತಿ ನೀಡಿದರು.
ಪ್ರೌಢ ಶಾಲಾ ಮುಖ್ಯಶಿಕ್ಷಕ ಸತ್ಯಶಂಕರ ಭಟ್ ಸ್ವಾಗತಿಸಿದರು. ಶಿಕ್ಷಕ ಉಮೇಶ್ ನಿರೂಪಿಸಿದರು. ವೇದವ್ಯಾಸ ವಿದ್ಯಾಲಯದ ಮುಖ್ಯಶಿಕ್ಷಕ ಪ್ರಶಾಂತ್. ಬಿ.ವಂದಿಸಿದರು.