ಘಟ್ಟಿರಡ್ಡಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಶಾಲಾ ದಾಖಲಾತಿ ಆಂದೋಲನ ನಡೆಯಿತು. ಮುಖ್ಯಶಿಕ್ಷಕ ಮಹಮದ್ ರಫಿ, ಶಿಕ್ಷಕರಾದ ಕಾವ್ಯಾ, ನೇತ್ರಾ, ಗಂಗಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಶಕುಂತಲಾ, ಯಂಕಮ್ಮ ಇತರರಿದ್ದರು. 
ಜಿಲ್ಲೆ

ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡಿ

Kopala - Desk - Eraveni

ಅಳವಂಡಿ: ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ದಾಖಲಾತಿ ಆಂದೋಲನ ಮಂಗಳವಾರ ನಡೆಯಿತು. ಮುಖ್ಯ ಶಿಕ್ಷಕ ಮಹಮದ್ ರಫಿ ಮಾತನಾಡಿ, ಶಿಕ್ಷಣ ಪಡೆಯುವುದು ಪ್ರತಿ ಮಕ್ಕಳ ಮೂಲಭೂತ ಕರ್ತವ್ಯ. ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡವುದು ಪಾಲಕರ ಕರ್ತವ್ಯ.

ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಅನೇಕ ಸೌಲಭ್ಯಗಳನ್ನು ನೀಡಿದ್ದು ಅವುಗಳನ್ನು ಬಳಸಿಕೊಂಡು ವಿದ್ಯಾವಂತರಾಗುವಂತೆ ಸಲಹೆ ನೀಡಿದರು. ಶಿಕ್ಷಕಿಯರಾದ ಕಾವ್ಯಾ, ನೇತ್ರಾ, ಗಂಗಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಶಕುಂತಲಾ ಅಂಗಡಿ, ಯಂಕಮ್ಮ ಭಾವಿಕಟ್ಟಿ, ಪ್ರಮುಖರಾದ ದೇವಪ್ಪ ಹಳ್ಳಿಗುಡಿ, ಶೇಖರಪ್ಪ ಡಂಬಳ, ಬಸವರಾಜ ಸಂಗರಡ್ಡಿ, ರಣದಪ್ಪ ಪೂಜಾರ, ಉಮೇಶ, ಶಿವನಗೌಡ ಅಲ್ಲಿಪೂರ, ಶಿವಕುಮಾರ ಡಂಬಳ, ಯಂಕಪ್ಪ ಹರಿಜನ, ರಾಮಣ್ಣ ಪೂಜಾರ ಇತರರಿದ್ದರು.