ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಆರ್ಥಿಕ ಹಿನ್ನಡೆಯ ವಿದ್ಯಾರ್ಥಿಗಳು ಸಮಾಜದ ಸಹಾಯಹಸ್ತ ಪಡೆದು ಸಾಧಕರಾಗಿ ಬೆಳೆದು ಸಮಾಜದ ಋಣ ತೀರಿಸುವ ಕಾರ್ಯ ಮಾಡಬೇಕು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.
ಮೂಲ್ಕಿ ರಾಮಕೃಷ್ಣ ಪೂಂಜ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಟ್ರಸ್ಟಿ ಭಾಸ್ಕರ್ ಪೂಂಜರವರ ಪುತ್ರಿಯರಾದ ಆರತಿ ಹೆಗ್ಡೆ, ದೀಪಾ ಪೂಂಜ ಸಹಕಾರದೊಂದಿಗೆ ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಹಸ್ತ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಸಹಾಯ ಪಡೆದವರು ದಾನ ನೀಡಿದವರನ್ನು ಸದಾ ನೆನಪಿನಲ್ಲಿರಿಸಿ ಅವರನ್ನು ಜೀವನದ ಮಾದರಿಯಾಗಿ ಸ್ವೀಕರಿಸಿ ಬೆಳೆದು ಮುನ್ನಡೆಯಬೇಕು. ಶಿಕ್ಷಣ, ಆರೋಗ್ಯ ರಕ್ಷಣೆಗಾಗಿ ಸಮಾಜದ ದೀನ ವರ್ಗಕ್ಕೆ ದೊಡ್ಡ ಮೊತ್ತದ ಸಹಕಾರ ವರ್ಷಂಪ್ರತಿ ನೀಡುತ್ತಾ ಬರುತ್ತಿರುವ ಮೂಲ್ಕಿ ರಾಮಕೃಷ್ಣ ಪೂಂಜ ಚಾರಿಟೆಬಲ್ ಟ್ರಸ್ಟ್ ಕಾರ್ಯ ಅಭಿನಂದನೀಯ ಎಂದರು.
ಟ್ರಸ್ಟ್ ಅಧ್ಯಕ್ಷ ಅರವಿಂದ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮೂಲ್ಕಿ ನಪಂ ಮಾಜಿ ಅಧ್ಯಕ್ಷ ಸುನೀಲ್ ಆಳ್ವ, ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಸದಸ್ಯ ಸುಭಾಷ್ ಶೆಟ್ಟಿ, ಮೂಲ್ಕಿ ಬಂಟರ ಸಂಘ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮುರಳೀಧರ ಭಂಡಾರಿ, ಡಾ.ವಾಸುದೇವ ಬೆಳ್ಳೆ, ಪೂಂಜಾ ಚಾರಿಟೆಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಅಶ್ವಿನಿ ಪೂಂಜ, ಆದಿತ್ಯ ಪೂಂಜ, ನಿರ್ದೇಶಕರಾದ ವಿನೋದ್ ಸಾಲ್ಯಾನ್, ಉದಯ್ ಕುಮಾರ್ ಶೆಟ್ಟಿ, ರಂಗನಾಥ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ವೈ.ಎನ್.ಸಾಲ್ಯಾನ್, ಚಂದ್ರಹಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.