ಹಗರಿಬೊಮ್ಮನಹಳ್ಳಿ: ವಿದ್ಯಾರ್ಥಿಗಳು ದಿನಕ್ಕೆ ಐದಿನೈದು-ಇಪ್ಪತ್ತು ನಿಮಿಷ ಕನ್ನಡ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ, ಕನ್ನಡದ ಶಬ್ಧಗಳು ಸಂಗ್ರಹ ಉತ್ತಮವಾಗುತ್ತೆ ಎಂದು ಕರ್ನಾಟಕ ರಕ್ಷಣ ವೇದಿಕೆಯ(ನಾರಾಯಣಗೌಡರ ಬಣ) ತಾಲೂಕು ಅಧ್ಯಕ್ಷ ಎನ್.ಎಂ.ಗೌಸ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದನ್ನೂ ಓದಿ: ಪ್ರಸ್ತುತ ಪ್ರಶಸ್ತಿ ಕೊಡುವುದು ಬಿಜಿನೆಸ್: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಬೇಸರ
ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಜಯವಾಣಿ ವಿದ್ಯಾರ್ಥಿಮಿತ್ರ ಪತ್ರಿಕೆಗಳನ್ನು ಶನಿವಾರ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳ ಜೀವನ ಬಂಗಾರದ ಜೀವನ ಈ ಸಮಯವನ್ನು ಹಾಳುಮಾಡಿಕೊಳ್ಳದೆ ಚೆನ್ನಾಗಿ ಓದಿದರೆ, ನಿಮಗೆ ಭವಿಷ್ಯವಿರುತ್ತೆ. ಶಿಕ್ಷಣದಿಂದ ವಂಚಿತರಾಗಬೇಡಿ. ಪಾಲಕರು ಎಷ್ಟು ಕಷ್ಟಗಳನ್ನು ಅನುಭವಿಸಿ ನಿಮ್ಮ ಭವಿಷ್ಯ ರೂಪಿಸುತ್ತಿದ್ದಾರೆ ಎನ್ನುವುದು ನಿಮ್ಮ ಕಲ್ಪನೆಗೆ ಬರಲಿ. ಸರ್ಕಾರಗಳು ನಿಮಗಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿವೆ. ಅವುಗಳ ಸದುಪಯೋಗ ಪಡೆಯಿರಿ. ಉತ್ತಮ ಅಂಕಗಳನ್ನು ತೆಗೆದು ಶಾಲೆಗೂ, ಪಾಲಕರಿಗೂ ಮತ್ತು ಊರಿಗೂ ಕೀರ್ತಿವಂತರಾಗಿ ಎಂದರು.
ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ರವಿನಾಯ್ಕ ಮಾತನಾಡಿ, ಓದುವುದಕ್ಕೆ ಯಾವುದೇ ಸಮಯ, ಯಾವುದೇ ಪುಸ್ತಕಗಳೆನ್ನದೆ ಓದಿ ಜ್ಞಾನ ವೃದ್ಧಿಯಾಗುತ್ತೆ. ಮೊಬೈಲ್, ಟಿವಿ.ಗಳಿಂದ ದೂರವಿರಬೇಕು. ಪತ್ರಿಕೆಗಳನ್ನು ನಿತ್ಯ ಓದಬೇಕು. ಸಾಮಾನ್ಯ ಜ್ಞಾನ ಬೆಳೆಯುತ್ತೆ ಎಂದರು.
ಪತ್ರಿಕೆಗಳ ವಿತರಕ ಬಂಡಿಹಳ್ಳಿ ಮಂಜುನಾಥ, ಜೆಸ್ಕಾಂ ಎಸ್‌ಒ ಜೆ.ಮಂಜುನಾಥ, ವಿದ್ಯುತ್ ಗುತ್ತಿಗೆದಾರರಾದ ಪೂರ‌್ಯಾನಾಯ್ಕಾ, ಮಂಜುನಾಥ ಸ್ವಾಮಿ, ಕೊಟ್ರೇಶ ಸ್ವಾಮಿ, ಮುಟುಗನಹಳ್ಳಿ ಹನುಮಂತಪ್ಪ, ಪತ್ರಕರ್ತರಾದ ಮಜ್ಗಿ ವೀರೇಶ, ವಿಶ್ವನಾಥ ಬಾವಿಕಟ್ಟಿ, ಪ್ರಮುಖರಾದ ರುದ್ರೇಶ, ಶಿಕ್ಷಕ ಲಕ್ಷ್ಮಣ ಮುಂತಾದವರಿದ್ದರು.