ಜಿಲ್ಲೆ

9 ಮತ್ತು 10ನೇ ತರಗತಿ ಹೊಸ ಶಾಲೆಯಲ್ಲ, ಮುಂದುವರಿದ ಶಾಲೆ ಎಂದು ಪರಿಗಣಿಸಬೇಕು: ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು: ಶಾಲೆಗಳಿಗೆ ಮಾನ್ಯತೆ ನೀಡುವ ವಿಚಾರವಾಗಿ 9 ಮತ್ತು 10ನೇ ತರಗತಿಯನ್ನು ಪ್ರಾಥಮಿಕ ಶಿಕ್ಷಣದ ಮುಂದುವರೆದ ಶಿಕ್ಷಣ ಎಂದು ಪರಿಗಣಿಸಬೇಕು ಮತ್ತು ಹೊಸ ಶಾಲೆ ಎಂದು ಪರಿಗಣಿಸಬಾರದು ಎಂದು ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲ ಉಪ ನಿರ್ದೇಶಕರಿಗೆ ಸೂಚನೆ ನೀಡಿದೆ.

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯು ಜ್ಞಾಪನಾ ಪತ್ರ ಹೊರಡಿಸಿದೆ. ಇದಕ್ಕೆ ಅವಶ್ಯ ತಿದ್ದುಪಡಿ ತಂದಿದ್ದು, ಇನ್ನು ಮುಂದೆ 1ರಿಂದ 8 ಅಥವಾ 6ರಿಂದ 8ನೇ ತರಗತಿ ನಡೆಯುತ್ತಿರುವ ಶಾಲಾ ಆವರಣದಲ್ಲಿ 9 ಮತ್ತು 10ನೇ ತರಗತಿಯನ್ನು ನೋಂದಾಯಿಸಲು ಅರ್ಜಿ ಸಲ್ಲಿಸಿದಲ್ಲಿ ಅಂತಹ ಅರ್ಜಿಗಳನ್ನು ಮುಂದುವರೆದ ಶಾಲೆ ಎಂದು ಪರಿಗಣಿಸಬೇಕು. ಅದರ ಅನ್ವಯ ನೋಂದಣಿ ನಿಯಮಗಳ ಅನುಸಾರ ಕ್ರವಹಿಸಬೇಕು.

ಅದೇ ರೀತಿ ಇಂತಹ ಶಾಲೆಗಳು ಮಾನ್ಯತೆ, ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿಯೂ ಮುಂದುವರೆದ ಶಾಲೆ ಎಂದು ಪರಿಗಣಿಸಬೇಕು. ಇಂತಹ ಶಾಲೆಗಳಿಗೆ ಭದ್ರತಾ ಠೇವಣಿಯನ್ನು ನಿರ್ಧರಿಸುವ ಸಂದರ್ಭದಲ್ಲಿ ಮುಂದುವರೆದ ಶಾಲೆಗೆ ನಿಗದಿ ಪಡಿಸಿರುವ ಮೊತ್ತವನ್ನೇ ಮುಂದುವರೆಸಬೇಕು. ಯಾವುದೇ ಕಾರಣಕ್ಕೂ 9 ಮತ್ತು 10ನೇ ತರಗತಿಯನ್ನು ಹೊಸ ಶಾಲೆ ಎಂದು ಪರಿಗಣಿಸುವಂತಿಲ್ಲ ಎಂದು ಸೂಚಿಸಿದೆ.