ಜಿಲ್ಲೆ

ಹೆಬ್ರಿಯಲ್ಲಿ ಅರ್ಲಿ ಬರ್ಡ್ ಕಾರ್ಯಕ್ರಮ

ಇಂದಿರಾ ಎನ್ ಕೆ

ಹೆಬ್ರಿ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಆಶ್ರಯದಲ್ಲಿ ಮೈಸೂರು ನೇಚರ್ ಕನ್ಸರ್ವೇಷನ್ ಫೌಂಡೇಶನ್, ಡಾ.ಸಲೀಂ ಅಲಿ ಸವಿ ನೆನಪಿಗಾಗಿ ಹೆಬ್ರಿ ಸಾರ್ವಜನಿಕ ಗ್ರಂಥಾಲಯದಲ್ಲಿ ಹೆಬ್ರಿ ತಾಲೂಕು ಪಂಚಾಯಿತಿ, ಗ್ರಾಪಂ ಸಹಕಾರದಲ್ಲಿ ಅರ್ಲಿ ಬರ್ಡ್ ಕಾರ್ಯಕ್ರಮ ಜರುಗಿತು.

ಹೆಬ್ರಿ ಕನ್ಯಾನ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ 10 ಕರವಳಿಯ ಪಕ್ಷಿಗಳನ್ನು ಪರಿಚಯಿಸಿ, ಅವುಗಳ ಚಲನವಲನ, ಆಹಾರಭ್ಯಾಸದ ಬಗ್ಗೆ ಮನವರಿಕೆ ಮಾಡಲಾಯಿತು. ಮುಖ್ಯ ಶಿಕ್ಷಕಿ ಶ್ವೇತಾ ದಿವಾಕರ್ ಶೆಟ್ಟಿ, ಗ್ರಂಥ ಪಾಲಕಿ ಪುಷ್ಪಾವತಿ ಶೆಟ್ಟಿ ಉಪಸ್ಥಿತರಿದ್ದರು.