ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಸ್ತೆ ಅವ್ಯವಸ್ಥೆಯಿಂದ ಅನೇಕ ಅಮಾಯಕ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ, ಸ್ವಾತಂತ್ರೃ ಹೋರಾಟಗಾರರಾದ ಕಾರ್ನಾಡು ಸದಾಶಿವ ರಾವ್, ರಾಮಕೃಷ್ಣ ಪೂಂಜ ಅವರ ಹುಟ್ಟೂರಾದ ಮೂಲ್ಕಿಯಲ್ಲಿ ರಸ್ತೆ ಹಾಗೂ ಮೂಲಸೌಕರ್ಯಗಳನ್ನು ಜನರಿಗೆ ಒದಗಿಸಿ ಅವರಿಗೆ ಗೌರವ ನೀಡುವ ಕಾರ್ಯವಾಗಬೇಕು ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಹೇಳಿದರು.
ಮೂಲ್ಕಿ ನಪಂ ವ್ಯಾಪ್ತಿಯಲ್ಲಿ ರಸ್ತೆಗಳ ಅವ್ಯವಸ್ಥೆ ಹಾಗೂ ಎಲ್ಲ ವಾರ್ಡ್‌ನ ನಾಗರಿಕರಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ವತಿಯಿಂದ ಮೂಲ್ಕಿ ನಪಂ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಡಿವೈಎಫ್‌ಐ ಜಿಲ್ಲಾಧ್ಯಕ್ಷ ಇಮ್ತಿಯಾಜ್ ಮಾತನಾಡಿ, ನಪಂ ವ್ಯಾಪ್ತಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಕೊರತೆ ಇದ್ದರೂ ಅಧಿಕಾರಿ ವರ್ಗ ಸ್ಪಂದಿಸುತ್ತಿಲ್ಲ ಎಂದರು.
ಡಿವೈಎಫ್‌ಐ ಜಿಲ್ಲಾ ಸದಸ್ಯ ಶ್ರೀನಾಥ್ ಕುಲಾಲ್, ಮೂಲ್ಕಿ ಘಟಕ ಅಧ್ಯಕ್ಷ ಸಾದಿಕ್, ಪ್ರಮುಖರಾದ ಅಸ್ಮತ್, ರಮೇಶ್ ಮೂಲ್ಕಿ, ಚಂದ್ರಕಾಂತ ದೇವಾಡಿಗ, ಮಕ್ಸೂದ್, ಆಸಿಫ್ ಕಾರ್ನಾಡ್, ಅಕ್ಬರ್, ಇರ್ಫಾನ್, ಅಸ್ಲಾಂ ಉಪಸ್ಥಿತರಿದ್ದರು. ಶ್ರೀನಾಥ್ ಕುಲಾಲ್ ನಿರೂಪಿಸಿದರು.