ಮಂಡ್ಯ: ಮೂಕ ಮಹಿಳೆ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರವೆಸಗಿ ವಿಕೃತಿ ಮೆರೆದಿರುವ ಕೃತ್ಯ ಪಾಂಡವಪುರ ತಾಲೂಕಿನ ಹೊನಗಾನಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಏ.1ರಂದು ಜಾನುವಾರು ಮೇಯಿಸುತ್ತಿದ್ದ 48 ವರ್ಷದ ಮೂಕ ಮಹಿಳೆಯನ್ನ ಕೈಸನ್ನೆ ಮೂಲಕ ಹತ್ತಿರಕ್ಕೆ ಕರೆದ ಕಾಮುಕರು, ಆಕೆಯನ್ನ ಹೊಂಗೆ ಮರದಡಿಗೆ ಹೊತ್ತೊಯ್ದು ಅತ್ಯಾಚಾರವೆಸಗಿದ್ದಾರೆ. ನೋವಿನಿಂದ ನರಳುತ್ತಿದ್ದ ಸಂತ್ರಸ್ತೆಯನ್ನು ವಿಚಾರಿಸಿದಾಗ ಪ್ರಕರಣ ಬಯಲಾಗಿದೆ.
ಕೃತ್ಯ ಬೆಳಕಿಗೆ ಬಂದ ಬಳಿಕ ದೂರು ನೀಡದಂತೆ ಸಂತ್ರಸ್ತೆ ಕುಟುಂಬದ ಮೇಲೆ ಆರೋಪಿಗಳ ಕುಟುಂಬಸ್ಥರು ಒತ್ತಡ ಹಾಕಿದ್ದಾರೆ. ಸಂಧಾನಕ್ಕೆ ಒಪ್ಪದೆ ಸಂತ್ರಸ್ತೆ ಪುತ್ರ ದೂರು ನೀಡಿದ್ದಾರೆ. ಅತ್ಯಾಚಾರ ಆರೋಪಿಗಳಾದ ಪ್ರಸನ್ನ, ಶೇಖರ್ ಮತ್ತು ಕವನ್ ಎಂಬುವರನ್ನು ಪಾಂಡವಪುರ ಪೊಲೀಸರು ಬಂಧಿಸಿದ್ದಾರೆ.