ಬೆಂಗಳೂರು: ಡಾರ್ಕ್‌ನೆಟ್‌ನಲ್ಲಿ ವಿದೇಶದಿಂದ ಅಂಚೆ ಮೂಲಕ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರು ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿಯ ರಾಹುಲ್ ಮತ್ತು ದರ್ಶನ್ ಬಂಧಿತರು. 50 ಲಕ್ಷ ರೂ. ಮೌಲ್ಯದ 1 ಸಾವಿರ ಎಲ್‌ಎಸ್‌ಡಿ ಪೇಪರ್ ಸ್ಟ್ರಿಪ್ಸ್ ಗಳು, 2 ಮೊಬೈಲ್ ಹಾಗೂ 16 ಸಾವಿರ ರೂ. ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಡಾರ್ಕ್ ನೆಟ್ ಮೂಲಕ ವಿದೇಶದಲ್ಲಿ ಇರುವ ಪೆಡ್ಲರ್‌ಗಳ ಬಳಿ ಡ್ರಗ್ಸ್ ಖರೀದಿಸಿ ಕೊರಿಯರ್ನಲ್ಲಿ ನಗರಕ್ಕೆ ತರಿಸಿಕೊಳ್ಳುತ್ತಿದ್ದರು. ಆನಂತರ ಆರೋಪಿಗಳು ತಮ್ಮ ಸಹಚರರ ಮೂಲಕ ವ್ಯಸನಿಗಳಿಗೆ ಮಾರಾಟ ಮಾಡುತ್ತಿದ್ದರು. ರಾಹುಲ್ ವೃತ್ತಿಪರ ಪೆಡ್ಲರ್ ಆಗಿದ್ದು, ಆತನ ಮೇಲೆ ಚನ್ನಮ್ಮನಕೆರೆ ಅಚ್ಚುಕಟ್ಟು ಸೇರಿ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಸಿಸಿಬಿ ಪೊಲೀಸರು ರಾಹುಲ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರ ಬಂದು ಮತ್ತೆ ತನ್ನ ದಂಧೆಯಲ್ಲಿ ನಿರತರಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.