ಜಿಲ್ಲೆ

'ಡ್ರಗ್ಸ್​ ಸೇವಿಸಲು ಪೀಡಿಸುತ್ತಿದ್ದ... ಮೊಬೈಲ್​ನಲ್ಲಿ ವಿಡಿಯೋ ಮಾಡಿಸಿ ಹಿಂಸಿಸುತ್ತಿದ್ದ'

arunakunigal

ಬೆಂಗಳೂರು: ಡ್ರಗ್ಸ್​ ವ್ಯಸನಿಯೊಬ್ಬನ ಕರ್ಮಕಾಂಡದ ಬಗ್ಗೆ ಆತನ ಪತ್ನಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಈ ಸುದ್ದಿ ಎಂತಹವರನ್ನೂ ಬೆಚ್ಚಿಬೀಳಿಸುತ್ತೆ.

ಗಂಡನ ವಿಕೃತ ಮನಸ್ಥಿತಿ ಕುರಿತ ಕೇಸ್​, ಬೆಂಗಳೂರಿನ ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ದಾಖಲಾಗಿದೆ. ಕೋರಮಂಗಲ ನಿವಾಸಿ ಲೋಹಿತ್ ವಿರುದ್ಧ ಈತನ ಪತ್ನಿಯೇ ದೂರು ದಾಖಲಿಸಿದ್ದಾರೆ.

ಲೋಹಿತ್​ನ ಡ್ರಗ್ಸ್​ ಚಟದಿಂದ ಈತನ ಪತ್ನಿಗೆ ಜೀವನವೇ ಸಾಕುಸಾಕು ಅನ್ನಿಸುವಷ್ಟು ಹಿಂಸೆಯಾಗಿದೆ. ಈ ಬಗ್ಗೆ ದೂರು ದಾಖಲಿಸಿರುವ ಪತ್ನಿ, 'ಮೊಬೈಲ್ ಮೇಲೆ ಕೊಕೇನ್​ ಇಟ್ಟು ಹೇಗೆ ಎಳೀಬೇಕು? ಎಂದು ಹೇಳಿಕೊಟ್ತಿದ್ದ. ಡ್ರಗ್ಸ್​ ಬಗ್ಗೆ ಬಲವಂತವಾಗಿ ಎಕ್ಸ್​ಪ್ಲೇನ್ ಮಾಡ್ತಿದ್ದ. ಅವನು ಡ್ರಗ್ಸ್​ ಸೇವಿಸುವ ದೃಶ್ಯವನ್ನು ಮೊಬೈಲ್​ನಲ್ಲಿ ವಿಡಿಯೋ ಮಾಡುವಂತೆ ಪೀಡಿಸುತ್ತಿದ್ದ. ಅಷ್ಟೇ ಅಲ್ಲ ಆ ದೃಶ್ಯವನ್ನು ಫೇಸ್​ಬುಕ್​ಗೆ ಹಾಕೋದಾಗಿ ಹೇಳುತ್ತಿದ್ದ. ಪತಿಯ ಮಾದಕ ಚಟಕ್ಕೆ ಅವರ ತಂದೆ-ತಾಯಿಯೇ ಸಪೋರ್ಟ್ ಮಾಡ್ತಾರೆ...' ಎಂದು ಸಂತ್ರಸ್ತೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

'ನನ್ನ ಪತಿ ಥಣಿಸಂದ್ರದಲ್ಲಿ ವಾಸವಿರುವ ನೀಗ್ರೋಗಳ ಬಳಿ ಕೊಕೇನ್ ಖರೀದಿಸುತ್ತಿದ್ದ. ತಾನು ಡ್ರಗ್ಸ್​ ಚಟಕ್ಕೆ ಬಿದ್ದಿದ್ದು ಸಾಲದು ಅಂತ ನನ್ನನ್ನೂ ಡ್ರಗ್ಸ್​ ಸೇವಿಸುವಂತೆ ಪೀಡಿಸುತ್ತಿದ್ದ. ಹಲವು ಬಾರಿ ಮಾದಕ ಟ್ಯಾಬ್ಲೇಟ್ ತಿನ್ನಿಸಿ ವಿಕೃತಿ ಮೆರೆದಿದ್ದ. ಬಲವಂತವಾಗಿ ಡ್ರಿಂಕ್ಸ್​ ಮಾಡಿಸಿ ಚಿತ್ರಹಿಂಸೆ ಕೊಡ್ತಿದ್ದ. ಮನೆಯಲ್ಲಿ ಕೊಕೇನ್​ ಜತೆಗೆ ಗಾಂಜಾವನ್ನೂ ಸ್ಟಾಕ್ ಮಾಡಿಕೊಂಡಿರುತ್ತಿದ್ದ' ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಆರೋಪಿ ಲೋಹಿತ್​, ವಿದ್ಯಾವಂತ, ಐಟಿ ಕಂಪನಿ ಉದ್ಯೋಗಿ. ಅವರ ತಂದೆ ಇಸ್ರೋ ಉದ್ಯೋಗಿ.