ಕಾಸರಗೋಡು: ಕಾರಡ್ಕ ಬ್ಲಾಕ್ ಪಂಚಾಯಿತಿ ನೇತೃತ್ವದಲ್ಲಿ ಕಾರಡ್ಕ ಬ್ಲಾಕ್‌ಪಂಚಾಯಿತಿ ಮೈದಾನದಲ್ಲಿ ಜ.12ರ ವರೆಗೆ ನಡೆಯಲಿರುವ ಫೇಮ್-2025 (ಎಫ್‌ಎಎಂಇ-ಫಾರ್ಮರ್ಸ್ ಅಗ್ರಿಕಲ್ಚರ್ ಮಾರ್ಕೆಟಿಂಗ್ ಎಕ್ಸ್‌ಪೋ) ಕೃಷಿ ಮಾರುಕಟ್ಟೆ ಮೇಳವನ್ನು ಶಾಸಕ ಸಿ.ಎಚ್.ಕುಞಂಬು ಉದ್ಘಾಟಿಸಿದರು. ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು.
ಪದ್ಮಶ್ರೀ ಸತ್ಯನಾರಾಯಣ ಬೆಳ್ಳೇರಿ ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣ ಸನ್ಮಾನಿಸಿದರು. ಮೇಳದ ಲಾಂಛನ ವಿನ್ಯಾಸ ಮಾಡಿದ ಅರ್ಜುನ್ ಪರಪ್ಪ ಅವರಿಗೆ ಪಿ.ರಾಘವೇಂದ್ರ ಸ್ಮರಣಿಕೆ ನೀಡಿದರು. ಮೇಳದ ಹೆಸರನ್ನು ಸೂಚಿಸಿದ ಪ್ರದೀಪ್ ಅವರನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು ಅಭಿನಂದಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಿ.ವಿ.ಮಿನಿ, ಎ.ಪಿ.ಉಷಾ, ಎಂ.ಧನ್ಯ, ಹಮೀದ್ ಪೊಸಲಿಗೆ, ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ, ಎ.ಸುರೇಂದ್ರನ್, ಎಂ.ಕುಞಂಬು ನಂಬಿಯಾರ್, ಕೆ.ನಳಿನಿ, ವೈ.ಯಶೋದಾ, ಎನ್.ರವಿ ಪ್ರಸಾದ್, ವಸಂತಿ ಗೋಪಾಲನ್, ಚನಿಯ ನಾಯಕ್, ಬಿ.ಕೃಷ್ಣನ್, ಸಾವಿತ್ರಿ ಬಾಲನ್, ಎಸ್.ಎಂ.ಮಹಮ್ಮದ್‌ಕುಞಿ, ನಬೀಸಾ ಸತ್ತಾರ್, ಎನ್.ಎ.ಮಜೀದ್, ಡಾ.ಶಮೀಮಾ ತನ್ವೀರ್, ಎಂ.ಮಾಧವನ್, ಮಣಿಕಂಠನ್, ಕೆ.ಬಿ.ಮೊಹಮ್ಮದ್‌ಕುಞಿ, ಬಡುವನ್ ಕುಞಿ ಉಪಸ್ಥಿತರಿದ್ದರು. ಬಿ.ಕೆ.ನಾರಾಯಣನ್ ಸ್ವಾಗತಿಸಿದರು. ಬಿ.ಗಿರೀಶ್ ವಂದಿಸಿದರು.