ಹಗರಿಬೊಮ್ಮನಹಳ್ಳಿ: ಮದ್ಯಪಾನ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ನೋಬಲ್ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಹಫೀಜ್ ಶೇಖ್ ಹೇಳಿದರು.
ಇದನ್ನೂ ಓದಿ: ಹಣ ಸಂಪಾದನೆಯೊಂದೇ ಶಿಕ್ಷಣ ಉದ್ದೇಶವಾಗಬಾರದು
ಪಟ್ಟಣದ ಹರ ಕಲ್ಯಾಣ ಮಂಟಪದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಗಳವಾರ ಆಯೋಜಿಸಿದ್ದ ಮದ್ಯವರ್ಜನಾ ಶಿಬಿರದಲ್ಲಿ ಮಾತನಾಡಿದರು. ಮಡದಿ ಮಕ್ಕಳ ಹಿತದೃಷ್ಟಿಯಿಂದ ಕುಡಿತದ ದಾಸರಾಗದೇ ಶಿಸ್ತುಬದ್ಧ ಜೀವನ ನಡೆಸಬೇಕು ಎಂದರು.
ಶಿಬಿರದ ಮಾರ್ಗದರ್ಶಕ ನಾಗೇಶ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯಾದ್ಯಂತ 1,822 ಶಿಬಿರಗಳನ್ನು ಆಯೋಜಿಸಿ 1,36,000 ಜನರು ಯೋಜನೆ ಲಾಭಪಡೆದು ಮದ್ಯ ವ್ಯಸನದಿಂದ ಮುಕ್ತರಾಗಿ ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಬೆಣಕಲ್ ಪ್ರಕಾಶ್, ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಿ.ಓಬಳೇಶ್, ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಜಾಗೃತಿ ವೇದಿಕೆ ಅಧ್ಯಕ್ಷ ಶಿವಪ್ಪನಾಯಕ, ತಾಲೂಕು ವೈದ್ಯಾಧಿಕಾರಿ ಡಾ.ಶಿವರಾಜ, ಪಿಎಸ್‌ಐ ಬಸವರಾಜ ಅಡವಿಬಾವಿ, ಶಿಬಿರದ ಗೌರವ ಅಧ್ಯಕ್ಷ ಕಿನ್ನಾಳ ಸುಭಾಷ್, ನಟರಾಜ ಬಾದಾಮಿ, ಹೊನ್ನೂರಪ್ಪ, ಶಿಲ್ಪಕಲಾ ಇತರರಿದ್ದರು.