ಹಣ ಸಂಪಾದನೆಯೊಂದೇ ಶಿಕ್ಷಣ ಉದ್ದೇಶವಾಗಬಾರದು

CCCCC SRI
Published on

ಚಿತ್ರದುರ್ಗ:ಹಣ ಸಂಪಾದನೆಯೇ ಬದುಕಿನ ಮತ್ತು ಅಧ್ಯಯನದ ಫಲಶೃತಿಯಾಗುತ್ತದೆ ಎನ್ನುವುದಾದರೆ ಅದಕ್ಕಿಂತ ಕೆಟ್ಟ ಬೆಳವಣಿಗೆ ಮತ್ತೊ ಂದಿಲ್ಲ. ಪದವಿ ನಮ್ಮ ಪ್ರಬುದ್ಧತೆ ಸಂಕೇತವಾಗಬೇಕೆಂದು ಮುರುಘಾಮಠದ ಡಾ.ಬಸವಕುಮಾರ ಸ್ವಾಮೀಜಿ
ನಗರದ ಚಂದ್ರವಳ್ಳಿ ಎಸ್‌ಜೆಎಂ ಪದವಿ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ 2023-24ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಆಯಾ ಕಾಲದಲ್ಲಿ ಯಾವ ಯಾವ ಒತ್ತಾಸೆಗಳಿಗೆ ಜಗತ್ತು ತೆರೆದುಕೊಳ್ಳುತ್ತದೆಂಬುದು ನಮಗೆ ಗೊತ್ತಿಲ್ಲ. ಜಾತಿವಾರು ಪ್ರತಿಭಾ ಪುರಸ್ಕಾರಗಳು ಒಳ್ಳೆಯ ಬೆಳವಣಿಗೆ ಅಲ್ಲ.ಅಂಥ ಕಾರ್ಯಗಳು ಜಾತಿ ಮೀರಿದಾಗ ಮಾತ್ರ ಬಸವಾದಿ ಶರಣರು ಕಂಡ ಸಮ ಸಮಾಜದ ಪರಿಕಲ್ಪನೆ ಸಾಕಾರಗೊಳ್ಳಲು ಸಾಧ್ಯ.
ಸಮಾಜದಲ್ಲಿ ಸಂಬಂಧಗಳು ಗಟ್ಟಿಯಾಗಿರುವುದು ಜೀವಂತವಾಗಿರುವುದು ಪದವಿಯಲ್ಲಿ ರ‌್ಯಾಂಕ್ ಪಡೆದವರಿಂದ ಅಲ್ಲ. ಬದಲಾಗಿ, ನಪಾಸಾದ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಂದ. ಹಾಗಾಗಿ ಇಂಥವರನ್ನು ಸನ್ಮಾನಿಸುವ ಅವಶ್ಯಕತೆ, ಅನಿವಾರ‌್ಯತೆ ಇಂದು ತುರ್ತಾಗಿ ದೆ. ಪದಕ ಪಡೆದವರೆಲ್ಲ ಬದುಕನ್ನು ಅರಿತವರಲ್ಲ. ಬದುಕನ್ನು ಅರಿತವರು ಪದಕ ಪಡೆದಂತೆ. ಪ್ರತಿಹಂತದಲ್ಲೂ ಹೊಸ ಭಾವನೆಗಳು ಹೊಸ ಬದುಕಿಗೆ ನಮ್ಮನ್ನು ಬೆಳವಣಿಗೆಯ ಹಾದಿ ತೋರಿಸುತ್ತವೆ ಎಂದರು.
ಪ್ರಾಂಶುಪಾಲ ಡಾ.ಎಸ್.ಎಚ್.ಪಂಚಾಕ್ಷರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯುಎಸಿ ಸಂಚಾಲಕ ಡಾ. ಹರ್ಷವರ್ಧನ್ ಎ., ನಿವೃತ್ತ ಪ್ರಾಚಾರ್ಯರಾದ ಪ್ರೊ.ಸಿ.ವಿ. ಸಾಲಿಮಠ, ಗ್ರಂಥಪಾಲಕ ಡಾ.ಎಚ್.ಸತೀಶ್‌ನಾಯ್ಕ,ಪ್ರಾಧ್ಯಾಪಕರಾದ ವಿ.ಎಸ್.ನಳಿನಿ,ಡಾ. ನಾಜಿರುನ್ನೀಸಾ,ಪ್ರೊ.ಎಚ್.ಎಂ.ಮಂಜುನಾಥಸ್ವಾಮಿ, ಪ್ರೊ.ಬಿ.ನಾಗರಾಜು,ಪ್ರೊ. ಬಿ.ಎಂ. ಸ್ವಾಮಿ, ಪ್ರೊ. ಸಿ.ಎನ್. ವೆಂಕಟೇಶ್, ಪ್ರೊ. ಟಿ.ಎನ್.ರಜಪೂತ್ ಮತ್ತಿತರರು ಇದ್ದರು. ಎಸ್.ಕಾವ್ಯಾ ಪ್ರಾರ್ಥಿಸಿದರು. ಡಾ.ಹರ್ಷವರ್ಧನ್ ವಂದಿಸಿದರು. ಡಾ. ಬಿ. ರೇವಣ್ಣ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net