ಮುಳ್ಳೇರಿಯ: ಶಿವಳ್ಳಿ ಬ್ರಾಹ್ಮಣ ಸವಾಜ ಏತಡ್ಕ ವಲಯದವರಿಂದ ಮುನಿಯೂರು ಹರಿನಾರಾಯಣ ನಡುವಂತಿಲ್ಲಾಯರ ಮನೆಯಲ್ಲಿ ಡಾ.ಪುಂಡೂರು ವೆಂಕಟರಾಜ ಪುಣಿಂಚತ್ತಾಯರ 88ನೇ ಜನ್ಮದಿನಾಚರಣೆ ಇತ್ತೀಚೆಗೆ ನಡೆಯಿತು.
ಶಿವಳ್ಳಿ ಬ್ರಾಹ್ಮಣ ಸವಾಜದ ಕೇಂದ್ರ ಸಮಿತಿ ರಕ್ಷಾಧಿಕಾರಿ ಸೀತಾರಾಮ ಕುಂಜತ್ತಾಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿವಳ್ಳಿ ಬ್ರಾಹ್ಮಣ ಸವಾಜ ಏತಡ್ಕ ವಲಯದ ಅಧ್ಯಕ್ಷ ಶ್ರೀನಿವಾಸ ಅಮ್ಮಣ್ಣಾಯ ಸಭಾಧ್ಯಕ್ಷತೆ ವಹಿಸಿದ್ದರು. ಮುನಿಯೂರು ಶ್ರೀಧರ ನಡುವಂತಿಲ್ಲಾಯ, ವಿಜಯರಾಜ ಪುಣಿಂಚತ್ತಾಯ, ಕವಿ, ಶಿವಳ್ಳಿ ಬ್ರಾಹ್ಮಣ ಸವಾಜದ ಮಹಿಳಾ ಟಕದ ಅಧ್ಯಕ್ಷೆ ಪ್ರಭಾವತಿ ಉಪಸ್ಥಿತರಿದ್ದರು.
ಪುಣಿಂಚತ್ತಾಯರು ಬರೆದ ತುಳು ಹಾಡನ್ನು ಕೇಂದ್ರ ಸಮತಿ ಉಪಾಧ್ಯಕ್ಷೆ ಸೀತಾರತ್ನ ಪುಣಿಂಚತ್ತಾಯ, ನಳಿನಿ ಅನಲತ್ತಾಯ, ಕೇಂದ್ರ ಸಮಿತಿ ಕೋಶಾಧಿಕಾರಿ ಸೀವಾ ಬಳ್ಳುಳಾಯ, ಪ್ರಭಾವತಿ ಕೆದಿಲಾಯ ಹಾಡಿದರು.
ಹರಿನಾರಾಯಣ ನಡುವಂತಿಲ್ಲಾಯರು ಸ್ವಾಗತಿಸಿದರು. ಅನಘಾ ಮತ್ತು ಆಶಿತಾ ಪ್ರಾರ್ಥಿಸಿದರು. ಶಿವಳ್ಳಿ ಬ್ರಾಹ್ಮಣ ಸವಾಜ ಕೋಶಾಧಿಕಾರಿ ಪಾರ್ವತಿ ಕುಂಜತ್ತಾಯರು ನಿರೂಪಿಸಿದರು. ಶ್ರೀಮತಿ ಗೀತಾ ಕುಂಜತ್ತಾಯರು ವಂದಿಸಿದರು.