ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಮನಃಶುದ್ಧಿ ಮತ್ತು ಆತ್ಮಶುದ್ಧಿಗಾಗಿ ದೇವರು ಸಂಗೀತವನ್ನು ಸೃಷ್ಟಿ ಮಾಡಿದ್ದು, ಒಳ್ಳೆಯ ಸಂಗೀತ ಹಾಡುಗಳನ್ನು ಕೇಳುವುದರಿಂದ ಸಂಸ್ಕಾರ ಜತೆಗೆ ಮನ ಶಾಂತಿ ಸಿಗಲು ಸಾಧ್ಯ ಎಂದು ಛಾಯಾಚಿತ್ರಗ್ರಾಹಕ ಗಣೇಶ್ ಶೆಣೈ ಕುಂಬಳೆ ಹೇಳಿದರು.
ಕಾಸರಗೋಡಿನ ಸಾಂಸ್ಕೃತಿಕ ಸಾಹಿತ್ಯಿಕ ಸಂಸ್ಥೆ ರಂಗಚಿನ್ನಾರಿಯ ಸಂಗೀತ ಟಕ ಸ್ವರ ಚಿನ್ನಾರಿಯ ನೇತೃತ್ವದಲ್ಲಿ ಕರಂದಕ್ಕಾಡು ಪದ್ಮಗಿರಿ ಕಲಾಕಟೀರದಲ್ಲಿ ನಡೆದ ‘ಸ್ವರ ಚಿನ್ನಾರಿ ಅಂತರ್ಧ್ವನಿ-5’ ಉದ್ಘಾಟಿಸಿ ಮಾತನಾಡಿದರು.
ಸಮಾಜಸೇವಕ ವಿ.ರವೀಂದ್ರನ್ ಕುಂಬಳೆ, ಮಂಗಳೂರಿನ ಛಾಯಾಗ್ರಾಹಕ ಚಂದ್ರಕಾಂತ ವೋರಾ, ನರೇಂದ್ರ ಕಾಮತ್, ನಂದಕಿಶೋರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಂಗಚಿನ್ನಾರಿ ನಿರ್ದೇಶಕ ಕೆ. ಸತೀಶ್ ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಸ್ವರ ಚಿನ್ನಾರಿಯ ಸಂಚಾಲಕ ಕಾಸರಗೋಡು ಚಿನ್ನಾ ನಿರೂಪಿಸಿದರು. ನಟ ಕೆ.ಎಸ್.ಶ್ರೀಧರ್ ಸಮಾರೋಪ ಭಾಷಣ ಮಾಡಿದರು. ಬರಹಗಾರ ವೈ.ಸತ್ಯನಾರಾಯಣ, ಸ್ವರ ಚಿನ್ನಾರಿಯ ಬಬಿತಾ ಆಚಾರ್ಯ, ಉಷಾ ಮೊದಲಾದವರಿದ್ದರು.