ರಾಜರಾಜೇಶ್ವರಿನಗರ: ಪರಿಸರ ಸಂರಣೆಗೆ ತೋರಿದ ನಿರ್ಲಕ್ಷ್ಯದಿಂದ ಹವಾಮಾನ ವೈಪರೀತ್ಯ ಹಾಗೂ ಬರಗಾಲ ಸಮಸ್ಯೆ ಎದುರಿಸುವಂತಾಗಿದೆ. ಗಿಡ ನೆಟ್ಟು ಪೋಷಿಸುವುದೇ ಸಮಸ್ಯೆ ಪರಿಹಾರಕ್ಕಿರುವ ಏಕೈಕ ಮಾರ್ಗ. ಪ್ರಾಕೃತಿಕ ಸಂಪತ್ತನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ಡಾ.ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.
ಹೃದಯ ಸ್ಪರ್ಶ ಟ್ರಸ್ಟ್ ಬಸವೇಶ್ವರನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಪತ್ತು ಗಳಿಸುವುದೇ ಬದುಕಿನ ಧ್ಯೇಯವಾಗಬಾರದು. ಸಾಮಾಜಿಕ ಜವಾಬ್ದಾರಿಗಳನ್ನೂ ನಿಭಾಯಿಸಬೇಕಿದೆ. ಕರವಸ್ತ್ರಗಳನ್ನು ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಫ್ಯಾಶಮ್ ಹೆಸರಿನಲ್ಲಿ ಟಿಶ್ಯೂ ಕಾಗದ ಬಳಕೆ ದಿನದಿಂದ ದಿನಕ್ಕ ಹೆಚ್ಚಾಗಿದೆ. ಇದರ ತಯಾರಿಕೆಗಾಗಿ ನಿತ್ಯ 20 ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯುತ್ತಿರುವುದು ದುರಂತ ಎಂದರು.
ಇಎಸ್ಐ ಆಸ್ಪತ್ರೆಯ ಚರ್ಮರೋಗ ತ ಡಾ.ಗಿರೀಶ್ ಮಾತನಾಡಿ, ಮನುಷ್ಯನಿಗೆ ಶ್ರೀಮಂತಿಕೆಗಿಂತ ಉತ್ತಮ ಆರೋಗ್ಯ ಮುಖ್ಯ. ಪರಿಸರ ಮಾಲಿನ್ಯದಿಂದ ಆರೋಗ್ಯ ಹದಗೆಡುತ್ತಿದೆ. ಪರಿಸರ ಸಂರಣೆಗೆ ಆದ್ಯತೆ ನೀಡಿದರೆ ಮಾತ್ರ ಉತ್ತಮ ಪರಿಸರ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಿರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಪ್ರತಿಧೀ ಆಯುರ್ವೇದ ವೈದ್ಯಕಿಯ ಸಂಸ್ಥೆ ವತಿಯಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಿತು.
ಲೋಕಾಯುಕ್ತ ಎಸ್ಐಟಿ ಡಿವೈಎಸ್ಪಿ ಎಲ್.ವೈ. ರಾಜೇಶ್, ಇಎಸ್ಐ ಆಸ್ಪತ್ರೆಯ ಡೀನ್ ಡಾ.ಆರ್. ಸಂಧ್ಯಾ, ಚರ್ಮರೋಗ ತ ಡಾ.ಗಿರೀಶ್, ಸಮಾಜ ಸೇವಕ ಎನ್. ವಿರೂಪಾಕ್ಷ, ಸಿರಿ ಆಸ್ಪತ್ರೆಯ ಮುಖ್ಯಸ್ಥ ಭರತ್ ಅಂಚೆ, ಅಧ್ಯಕ್ಷ ಸುರೇಶ್ ಮತ್ತಿತರರಿದ್ದರು.