ಮಸ್ಕಿ ತಾಲೂಕಿನ ತಲೇಖಾನ್ ಗ್ರಾಪಂ ಮುಂಭಾಗ ಕರವೇ ನೇತೃತ್ವದಲ್ಲಿ ವಸತಿ ಯೋಜನೆಯ ಫಲಾನುಭವಿಗಳು ಪ್ರತಿಭಟನೆ ನಡೆಸಿದರು. ಕರವೇ ತಾಲೂಕು ಅಧ್ಯಕ್ಷ ದುರಗರಾಜ ವಟಗಲ್, ಮುಖಂಡ ಆರ್. ಕೆ.ನಾಯಕ, ವಸತಿ ಯೋಜನೆಯ ಫಲಾನುಭವಿಗಳಾದ ಶಾಂತಮ್ಮ, ಶಾರದಾ, ಸರೋಜಾ, ಗಂಗಮ್ಮ, ಹನುಮಮ್ಮ ಇನ್ನಿತರರಿದ್ದರು.  
ಜಿಲ್ಲೆ

ಮನೆಗಳನ್ನು ನಿರ್ಮಿಸಲು ಅವಕಾಶ ನೀಡಿ

ಮಸ್ಕಿ: ಡಾ.ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ 2021-22ನೇ ಸಾಲಿನಲ್ಲಿ ನಿವೇಶನ ಪಡೆದ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಹಾಗೂ ಹಕ್ಕುಪತ್ರ ನೀಡಲು ಆಗ್ರಹಿಸಿ ಕರವೇ ಕಾರ್ಯಕರ್ತರು ತಾಲೂಕಿನ ತಲೇಖಾನ್ ಗ್ರಾಪಂ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಫಲಾನುಭವಿಗಳಿಗೆ ಮಂಜೂರಾತಿ ಆದೇಶ ನೀಡಿ

ಗ್ರಾಮ ಪಂಚಾಯಿತಿಗೆ ಹೆಚ್ಚುವರಿ ಮನೆಗಳು ಆಯ್ಕೆಯಾಗಿವೆ. ಆದರೆ, ಇದುವರೆಗೂ ಮುಂಜೂರಾತಿ ಪತ್ರ ನೀಡಿಲ್ಲ. ಆಯ್ಕೆಯಾದ ಫಲಾನುಭವಿಗಳಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮನೆಗಳನ್ನು ನಿರ್ಮಿಸಲು ಅನುಮತಿ ನೀಡುತ್ತಿಲ್ಲ ಎಂದು ಕರವೇ ತಾಲೂಕು ಅಧ್ಯಕ್ಷ ದುರಗರಾಜ ವಟಗಲ್ ಆರೋಪಿಸಿದರು.
ಕೆಲವು ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳಲು ಈಗಾಗಲೇ ತಳಪಾಯವನ್ನು ಹಾಕಿಕೊಂಡಿದ್ದಾರೆ. ಅದರ ಜಿಪಿಎಸ್ ಪೋಟೋಗಳನ್ನು ಅಭಿವೃದ್ಧಿ ಅಧಿಕಾರಿ ಅಪ್ಲೋಡ್ ಮಾಡುತ್ತಿಲ್ಲ ಕೂಡಲೇ ಆದೇಶ ಪ್ರತಿ, ಜಿಪಿಎಸ್ ಪೋಟೊ ಅಪ್ಲೋಡ್ ಮಾಡಿ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಅನುಮತಿ ನೀಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ತಲೇಖಾನ್ ಗ್ರಾಪಂ ಕಾರ್ಯದರ್ಶಿ ಥಾಮಸ್ ಅವರು ವಸತಿ ಯೋಜನೆಯ ಐದು ಜನ ಪಲಾನುಭವಿಗಳಿಗೆ ಹೋರಾಟದ ಸ್ಥಳದಲ್ಲಿ ನಿವೇಶನ ಮಂಜೂರಾತಿ ಆದೇಶ ಪತ್ರಗಳನ್ನು ನೀಡಿದರು. ಉಳಿದ 20 ಜನ ಪಲಾನುಭವಿಗಳಿಗೆ ಒಂದು ವಾರದೊಳಗೆ ಆದೇಶ ಪತ್ರ ವಿತರಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಕರವೇ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದರು.