More

    ತೆಲಂಗಾಣದಲ್ಲಿ ಚಾಲಕರ ಸಮವಸ್ತ್ರ ಧರಿಸಿ ಆಟೋ ಏರಿದ ರಾಹುಲ್! ಕಾರ್ಮಿಕರ ಸಮಸ್ಯೆ ಆಲಿಸಿದ ಕಾಂಗ್ರೆಸ್​ ನಾಯಕ

    ಹೈದರಾಬಾದ್​: ತೆಲಂಗಾಣದ ವಿಧಾನಸಭಾ ಚುನಾವಣಾ ಪ್ರಚಾರದ ಕೊನೆಯ ದಿನವಾದ ಇಂದು (ನ.28) ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಹೈದರಾಬಾದ್​ನ ಜುಬಿಲಿ ಹಿಲ್ಸ್​ ಏರಿಯಾದಲ್ಲಿ ಚಾಲಕರ ಸಮವಸ್ತ್ರ ಧರಿಸಿ ಆಟೋ ಸವಾರಿ ಮಾಡಿದ್ದಲ್ಲದೆ, ಚಾಲಕರ ಸಮಸ್ಯೆಗಳನ್ನು ಆಲಿಸಿದರು.

    ಆಟೋ ಸವಾರಿ ಮಾಡುವ ಮುನ್ನ ಆಟೋ ಚಾಲಕರ ಯೂನಿಫಾರ್ಮ್​ನಲ್ಲಿ ಚಾಲಕರ ಜೊತೆ ರಾಹುಲ್​ ಸೆಲ್ಫಿ ತೆಗೆದುಕೊಂಡರು. ಬಳಿಕ ಆಟೋ ಏರಿದ ರಾಹುಲ್​, ಸವಾರಿ ಮಾಡಿದರು. ಈ ವೇಳೆ ಭದ್ರತಾ ಸಿಬ್ಬಂದಿ ಆಟೋದ ಎರಡು ಕಡೆ ಓಡಿ ಬಂದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

    ಆಟೋ ಸವಾರಿಗೂ ಮುನ್ನ ರಾಹುಲ್​ ಗಾಂಧಿ ಅವರು ಹೈದರಾಬಾದ್​ನ ನೈರ್ಮಲ್ಯ ಮತ್ತು ಗಿಗ್ ಕಾರ್ಮಿಕರ ಜತೆ ಮಾತನಾಡಿದರು. ತೆಲಂಗಾಣದಲ್ಲಿ ಕಾಂಗ್ರೆಸ್​ಗೆ ಮತ ನೀಡಿ ಅಧಿಕಾರಕ್ಕೆ ತಂದರೆ, ರಾಜಸ್ಥಾನದಲ್ಲಿ ಇತ್ತೀಚೆಗೆ ಅಂಗೀಕರಿಸಿದ ಕಾನೂನಿನಂತೆಯೇ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಕಾನೂನನ್ನು ತರುತ್ತೇವೆ ಎಂದು ಭರವಸೆ ನೀಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿಗಳು ಹಾಗೂ ಸಚಿವರೊಂದಿಗೆ ಸಭೆ ನಡೆಸಿ ಕಲ್ಯಾಣ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

    ಇದೇ ಸಂದರ್ಭದಲ್ಲಿ ಗಿಗ್ ಕಾರ್ಯಕರ್ತರು ತಾವು ಪ್ರತಿದಿನ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಹುಲ್​ ಗಾಂಧಿ ಅವರಿಗೆ ವಿವರಿಸಿದರು. ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ವೆಚ್ಚ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ತಮ್ಮ ಆರ್ಡರ್ ಪ್ರತಿ ಗಳಿಕೆಯು ಕಡಿಮೆಯಾಗುತ್ತಿದೆ ಎಂದರು. ಅಲ್ಲದೆ, ವಿತರಣಾ ಶುಲ್ಕಗಳು ತುಂಬಾ ಕಡಿಮೆ ಮತ್ತು ಕಂಪನಿಗಳು ನಮ್ಮ ವಾಹನಗಳ ನಿರ್ವಹಣೆ ಅಥವಾ ಪೆಟ್ರೋಲ್ ವೆಚ್ಚವನ್ನು ನೀಡುತ್ತಿಲ್ಲ ಎಂದು ಹೇಳಿದರು. ಅಪಘಾತಗಳ ಸಂದರ್ಭದಲ್ಲಿ ವಿಮೆ ಇಲ್ಲದಿರುವ ಬಗ್ಗೆಯೂ ದೂರಿದರು.

    ನೀವು ನಿಮ್ಮ ಕಂಪನಿಗಳು ಮತ್ತು ಗ್ರಾಹಕರ ನಡುವೆ ಸಿಕ್ಕಿಹಾಕಿಕೊಂಡಿದ್ದೀರಿ ಎಂದು ನೀವು ನನಗೆ ಹೇಳಿದ ವಿಷಯದಿಂದ ನಾನು ಅರ್ಥಮಾಡಿಕೊಂಡಿದ್ದೇನೆ. ಇದು 21ನೇ ಶತಮಾನದ ಗುಲಾಮಗಿರಿ ಎಂದು ಸಂವಾದದ ವೇಳೆ ರಾಹುಲ್ ಗಾಂಧಿ ಖಂಡಿಸಿದರು ಮತ್ತು ಅಧಿಕಾರಕ್ಕೆ ಬಂದ ಬಳಿಕ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು.

    ಜುಬಿಲಿ ಹಿಲ್ಸ್‌ನ ಪಕ್ಷದ ಅಭ್ಯರ್ಥಿಯಾಗಿರುವ ರಾಜ್ಯ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಮತ್ತು ಮಾಜಿ ಟೀಮ್​ ಇಂಡಿಯಾ ನಾಯಕ ಮೊಹಮ್ಮದ್‌ ಅಜರುದ್ದೀನ್‌ ಅವರು ರಾಹುಲ್​ ಗಾಂಧಿಗೆ ಸಾಥ್​ ನೀಡಿದರು. (ಏಜೆನ್ಸೀಸ್​)

    ಇದೇನು ಮಾರುಕಟ್ಟೆಯೋ? ವರದಕ್ಷಿಣೆಯಾಗಿ ವರನಿಗೆ ಕೊಟ್ಟ ವಸ್ತುಗಳನ್ನು ನೋಡಿ ನೆಟ್ಟಿಗರು ಶಾಕ್​

    ಮುಂಬೈ ಇಂಡಿಯನ್ಸ್​ಗೆ ಹಾರ್ದಿಕ್ ಕ್ಯಾಪ್ಟನ್?;​ ವೈರಲ್ ಆಗ್ತಿದೆ ಜಸ್ಪ್ರೀತ್ ಬುಮ್ರಾ ಪೋಸ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts