More

    ಇದೇನು ಮಾರುಕಟ್ಟೆಯೋ? ವರದಕ್ಷಿಣೆಯಾಗಿ ವರನಿಗೆ ಕೊಟ್ಟ ವಸ್ತುಗಳನ್ನು ನೋಡಿ ನೆಟ್ಟಿಗರು ಶಾಕ್​

    ನವದೆಹಲಿ: ಭಾರತದಲ್ಲಿ ವರದಕ್ಷಿಣೆ ನೀಡುವುದು, ಪಡೆಯುವುದು ಎಲ್ಲವೂ ನಿಷಿದ್ಧ. ಆದರೂ ಅಲ್ಲೊಮ್ಮೆ ಇಲ್ಲೊಮ್ಮೆ ವರದಕ್ಷಿಣೆ ಸಂಬಂಧಿತ ಕಿರುಕುಳ ಪ್ರಕರಣಗಳು ಕೇಳಿ ಬರುತ್ತಲೇ ಇರುತ್ತವೆ. ವರದಕ್ಷಿಣೆ ನಿಷೇಧ ಕಾಯಿದೆ 1961ರ ಪ್ರಕಾರ, ಭಾರತದಲ್ಲಿ ವರದಕ್ಷಿಣೆ ಕೊಡುವುದು ಕಾನೂನು ಬಾಹಿರವಾಗಿದೆ. ಭಾರತೀಯ ದಂಡ ಸಂಹಿತೆ ಅನುಸಾರ, ವರದಕ್ಷಿಣೆ ಕೇಳಿ ಸಿಕ್ಕಿಬಿದ್ದರೆ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ಆಗುವ ಸಾಧ್ಯತೆ ಕೂಡ ಇದೆ.

    ನಮ್ಮಲ್ಲಿ ಅನೇಕ ಕಠಿಣ ಕಾನೂನುಗಳಿದ್ದರೂ ವರದಕ್ಷಿಣೆ ನೀಡುವುದು ಪಡೆಯುವುದು ತೆರೆಮರೆಯಲ್ಲಿ ಎಗ್ಗಿಲ್ಲದೇ ಸಾಗುತ್ತಿದೆ. ಇಲ್ಲೊಂದು ವರದಕ್ಷಿಣೆ ಪ್ರಕರಣ ವರದಿಯಾಗಿದ್ದು ಎಲ್ಲೆಡೆ ಭಾರಿ ಪ್ರಚಾರ ಪಡೆದಿದೆ. ಈ ಪ್ರಕರಣ ಸದ್ದು ಮಾಡಲು ಕಾರಣ ಏನೆಂದರೆ ಇಲ್ಲಿ ವರದಕ್ಷಿಣೆ ನೀಡಿರುವ ಪ್ರಮಾಣ. ಅಡುಗೆ ಮನೆಯಲ್ಲಿ ಬಳಸುವ ವಸ್ತುಗಳಿಂದಿಡಿದು ಎಸ್​ಯುವಿ ಕಾರು ಉಡುಗೊರೆವರೆಗೂ ವರದಕ್ಷಿಣೆ ನೀಡಿದ್ದು, ಇದೇನೂ ವರದಕ್ಷಿಣೆಯೋ ಅಥವಾ ಮಾರುಕಟ್ಟೆಯೋ ಎಂದು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

    ಮದುವೆ ಸಮಾರಂಭದಲ್ಲಿ ಈ ಎಲ್ಲ ವಸ್ತುಗಳನ್ನು ಪ್ರದರ್ಶಿಸಿದ್ದರೂ ಇದು ವರದಕ್ಷಿಣೆ ಎಂದು ನಿಖರವಾಗಿ ಹೇಳಲು ಯಾವುದೇ ಅಧಿಕೃತ ಹೇಳಿಕೆ ಇಲ್ಲ. ನೂರಾರು ವಸ್ತುಗಳನ್ನು ಪ್ರದರ್ಶಿಸುವ ಮಾರಾಟ ಪ್ರದರ್ಶನವೂ ಆಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

    ಉಡುಗೊರೆಯನ್ನು ನೋಡುವುದಾದರೆ ಎಸ್​ಯುವಿ ಕಾರು, ಅಡಿಗೆ ಸಲಕರಣೆಗಳು ಮತ್ತು ಪೀಠೋಪಕರಣಗಳ ಚರಣಿಗೆಗಳು ಮತ್ತು ಸಾಲುಗಳು. ಊಟದ ತಟ್ಟೆಗಳು, ಕಂಟೈನರ್ಸ್​, ಫ್ರೈಯಿಂದ ಪ್ಯಾನ್ಸ್​, ರೆಫ್ರಿಜರೇಟರ್​, ವೋಲ್ಟಾಸ್​ ಎಸಿ, ವಾಶಿಂಗ್​ ಮೆಶಿನ್​, ಕಪ್​ಬೋರ್ಡ್ಸ್​, ಹಾಸಿಗೆಗಳು ಮತ್ತು ಸೋಫಾ ಸೇರಿದಂತೆ ಅನೇಕ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಲಾಗಿದೆ.

    ವಿಡಿಯೋ ವೈರಲ್​ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೊಶವೂ ವ್ಯಕ್ತವಾಗುತ್ತಿದೆ. ನಿಷೇಧಿತ ಸಂಪ್ರದಾಯವು ಇನ್ನೂ ಕೆಲವು ಮದುವೆಗಳಲ್ಲಿ ಹೇಗೆ ಅದ್ಧೂರಿಯಾಗಿ ಆಚರಿಸಲಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರೀತಿಯನ್ನು ಎಂದೂ ಖರೀದಿಸಲು ಸಾಧ್ಯವಿಲ್ಲ, ಮಾರಾಟ ಮಾಡಲಾಗದು, ವರದಕ್ಷಿಣೆ ಬೇಡ ಎಂದು ಹೇಳಿ ಈ ರೀತಿಯಾಗಿ ಅನೇಕ ಕಾಮೆಂಟ್​ ಮೂಲಕ ವರದಕ್ಷಿಣೆ ಸಂಪ್ರದಾಯದ ವಿರುದ್ಧ ಜನರು ಧ್ವನಿ ಎತ್ತಿದ್ದಾರೆ. (ಏಜೆನ್ಸೀಸ್​)

    ಸಂಜೆಯ ಹೊತ್ತಿಗೆ ಬರಬಹುದು ಸಿಹಿ ಸುದ್ದಿ; ಸುರಂಗ ಕೊರೆತ ಬಹುತೇಕ ಪೂರ್ಣ, ಆಗರ್ ಯಂತ್ರದೊಂದಿಗೆ ಪೈಪ್‌ ಅಳವಡಿಕೆ ಆರಂಭ

    ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಶಿವರಾಜ್ ​ಕುಮಾರ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts