ಮರ ಬಿದ್ದು ತುಂಡಾಗಿರುವ ವಿದ್ಯುತ್ ಕಂಬಗಳು. 
ಜಿಲ್ಲೆ

ದೇವದಾರು ಮರ ಉರುಳಿ ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್‌ಗೆ ಹಾನಿ

Vinod Kumar

ಮೂಲ್ಕಿ: ಭಾರೀ ಗಾಳಿ ಮಳೆಗೆ ಮೂಲ್ಕಿಯ ವಿಜಯ ಕಾಲೇಜಿನ ಬಳಿಯ ಇತಿಹಾಸ ಪ್ರಸಿದ್ಧ ಮಾನಸ್ತಂಭ ವಿರುವ ಬಸದಿ ಬಳಿ ಭಾರೀ ಗಾತ್ರದ ದೇವದಾರು ಮರವು ಬುಡ ಸಮೇತ ವಿದ್ಯುತ್ ಕಂಬ ಹಾಗೂ ಟ್ರಾನ್ಸ್‌ಫಾರ್ಮರ್ ಮೇಲೆ ಬಿದ್ದು ಬಳಿಕ ನೆಲಕ್ಕುರುಳಿದೆ.

ಅಪಾಯದಲ್ಲಿ ಮಾನಸ್ಥಂಭ

ಮರ ಬಿದ್ದ ಕಾರಣ ರಸ್ತೆ ಸಂಚಾರ ಹಾಗೂ ಮೂಲ್ಕಿ ಪರಿಸರದಲ್ಲಿ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿತು. ಭಾರೀ ಗಾತ್ರದ ಮರದ ಬಳಿಯಲ್ಲಿದ್ದ ಇತಿಹಾಸ ಪ್ರಸಿದ್ಧ ಮಾನಸ್ಥಂಭ ಅಪಾಯದಲ್ಲಿದ್ದು, ಕುಸಿಯುವ ಭೀತಿ ಎದುರಿಸುತ್ತಿದೆ.

ಜೆಸಿಬಿ ಬಳಸಿ ಮರ ತೆರವು

ಸ್ಥಳಕ್ಕೆ ಮೂಲ್ಕಿ ನಗರ ಪಂಚಾಯಿತಿ ಅಧಿಕಾರಿಗಳು, ಮೆಸ್ಕಾಂ ಇಲಾಖೆ ಭೇಟಿ ನೀಡಿ ಪರಿಶೀಲಿಸಿದ್ದು, ಜೆಸಿಬಿ ಮೂಲಕ ಮರ ತೆರವುಗೊಳಿಸಲಾಯಿತು. ಅವಘಡದಿಂದಾಗಿ ಮೆಸ್ಕಾಂನ ಮೂರು ವಿದ್ಯುತ್ ಕಂಬ ಹಾಗೂ ಒಂದು ಟ್ರಾನ್ಸ್‌ಫಾರ್ಮರ್‌ಗೆ ಹಾನಿಯಾಗಿದ್ದು, ಸುಮಾರು ಮೂರು ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.