ಕಾಸರಗೋಡು: ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದ ಹಾಗೂ ತೆಂಕುತಿಟ್ಟು ಯಕ್ಷಗಾನದ ಬೃಹತ್ ಮ್ಯೂಸಿಯಂ ಯೋಜನೆಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 15 ಲಕ್ಷ ರೂ.ಧನಸಹಾಯ ನೀಡಿದ್ದಾರೆ. ಧನಸಹಾಯದ ಚೆಕ್ಕನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿಷ್ಠಾನದ ಅಧ್ಯಕ್ಷ, ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಭಾಗವತ ಶ್ರೀ ರಾಮಕೃಷ್ಣ ಮಯ್ಯ ಅವರಿಗೆ ಶ್ರೀ ವೀರೇಂದ್ರ ಹೆಗ್ಗಡೆ ಹಸ್ತಾಂತರಿಸಿದರು. ಸಾಂಸ್ಕೃತಿಕ ಪ್ರತಿಷ್ಠಾನದ ಕಾಮಗಾರಿ ಆರಂಭದಲ್ಲಿ 10 ಲಕ್ಷ ರೂ. ಧನಸಹಾಯ ನೀಡಲಾಗಿದ್ದು, ಶ್ರೀ ಮಂಜುನಾಥೇಶ್ವರ ಸ್ವಾಮಿಯ ಪ್ರಸಾದ ರೂಪವಾಗಿ ಮತ್ತೆ 15 ಲಕ್ಷ ರೂ. ಧನಸಹಾಯ ನೀಡಿ ಹರಸಿದ್ದಾರೆ. ಪ್ರತಿಷ್ಠಾನದ ಕಾರ್ಯಕರ್ತರಾದ ಪ್ರಸನ್ನ ಕಾರಂತ ದೇಶಮಂಗಲ, ಶ್ರೀಮುಖ ಮಯ್ಯ, ಸಿರಿಬಾಗಿಲು ಜತೆಗಿದ್ದರು.