ಜಿಲ್ಲೆ

ಸಂಪ್ಯ ಪೊಲೀಸ್​ ಠಾಣೆಗೆ ನೀರಿನ ಘಟಕ ಕೊಡುಗೆ

ಪುತ್ತೂರು ಗ್ರಾಮಾಂತರ: ಸಂಪ್ಯ ಪೊಲೀಸ್​ ಠಾಣೆಗೆ ಬೆಂಗಳೂರಿನ ರಾಯಲ್​ ಗ್ರೂಪ್​ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆಯಾಗಿ ನೀಡಿದ್ದು, ಹಸ್ತಾಂತರ ಕಾರ್ಯಕ್ರಮ ಸಂಪ್ಯಠಾಣೆಯಲ್ಲಿ ಇತ್ತೀಚೆಗೆ ನಡೆಯಿತು.

ಎಸ್​ಐ ಜಂಬೂರಾಜ್​ ಮಹಾಜನ್​ ಯಂತ್ರ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ಬೆಂಗಳೂರು ರಾಯಲ್​ ಗ್ರೂಪ್​ನ ರಫೀಕ್​ ಹಾಜಿ ಹಸ್ತಾಂತರಿಸಿದರು.

ಗ್ರೂಪ್​ನ ಹಂರರ್​ ಹಾಜಿ, ಇರ್ಷಾದ್​ ಹಾಜಿ, ಅಶ್ರಫ್​ ಹಾಜಿ, ಅಶ್ರು, ಅಬೂಬಕ್ಕರ್​ ಬಾಳಯ, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್​ ಉಜಿರೋಡಿ, ಡಿ.ಕೆ.ಹಂಝ ಹಾಜಿ, ಡಿ.ಕೆ ಶಮೀರ್​, ಉದ್ಯಮಿ ಯೂಸುಫ್​ ಹಾಜಿ ಕೈಕಾರ, ಕುಂಬ್ರ ವರ್ತಕರ ಸಂದ ಅಧ್ಯಕ್ಷ ರಫೀಕ್​ ಅಲ್​ರಾಯ, ಉದ್ಯಮಿ ಅಶೋಕ್​ ಪೂಜಾರಿ ಬೊಳ್ಳಾಡಿ, ಖಲೀಲ್​ ಚೆನ್ನಾರ್​, ರಮೇಶ್​ ಆಳ್ವ ಕಲ್ಲಡ್ಕ, ಅಝೀಜ್​ ನೀರ್ಪಾಡಿ, ಶರೀಪ್​ ಉಜಿರೋಡಿ, ಹಕೀಂ ಉಜಿರೋಡಿ, ಸಾದಿಕ್​ ಬಾಳಯ, ಜಮಾಲ್​ ಅಡ್ಕ, ಅಶ್ರಫ್​ ನೀರ್ಪಾಡಿ ಮತ್ತಿತರರು ಇದ್ದರು. ಸಂಪ್ಯ ಠಾಣೆಯ ಪ್ರವಿಣ್​ ರೈ ಸ್ವಾಗತಿಸಿ, ವಂದಿಸಿದರು.