ಪಾರಂಪಳ್ಳಿ ಪಡುಕರೆ ಅಂಗನವಾಡಿ ಚಿಣ್ಣರಿಗೆ ಸಮವಸ್ತ್ರವನ್ನು ಟೀಂ ಭವಾಬ್ದಿ ಅಧ್ಯಕ್ಷ ಸಂತೋಷ ತಿಂಗಳಾಯ ಅಂಗನವಾಡಿ ಶಿಕ್ಷಕಿ ನಾಗರತ್ನ ಅವರಿಗೆ ಹಸ್ತಾಂತರಿಸಿದರು.  
ಜಿಲ್ಲೆ

ಅಂಗನವಾಡಿ ಚಿಣ್ಣರಿಗೆ ಸಮವಸ್ತ್ರ ಕೊಡುಗೆ

ಕೋಟ: ಟೀಂ ಭವಾಬ್ದಿ, ಕೋಟತಟ್ಟು ಪಡುಕರೆ ವತಿಯಿಂದ ಪಾರಂಪಳ್ಳಿ ಪಡುಕರೆ ಅಂಗನವಾಡಿ ಚಿಣ್ಣರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಶನಿವಾರ ನಡೆಯಿತು.

ಟೀಮ್ ಭವಾಬ್ದಿ ಅಧ್ಯಕ್ಷ ಸಂತೋಷ ತಿಂಗಳಾಯ ಅಂಗನವಾಡಿ ಶಿಕ್ಷಕಿ ನಾಗರತ್ನ ಸಮವಸ್ತ್ರ ಹಸ್ತಾಂತರಿಸಿದರು. ಟೀಂ ಭವಾಬ್ದಿ ಸಂಚಾಲಕ ರವೀಂದ್ರ ತಿಂಗಳಾಯ, ಉಪಾಧ್ಯಕ್ಷ ಉದಯ್ ಬಂಗೇರ, ಕಾರ್ಯದರ್ಶಿ ಭರತ್, ಕೋಶಾಧಿಕಾರಿ ಶಿವಾನಂದ ಕುಂದರ್, ಮುಖ್ಯ ಶಿಕ್ಷಕ ರಾಘವೇಂದ್ರ ಉಪಾಧ್ಯಾಯ, ಅಂಗನವಾಡಿ ಸಹಾಯಕಿ ಸುಶೀಲಾ, ಭವಾಬ್ದಿ ಗೌರವ ಸಲಹೆಗಾರರಾದ ಗಣೇಶ್ ತಿಂಗಳಾಯ, ಕೌಶಿಕ್ ಜೋಗಿ ಹಾಗೂ ಸದಸ್ಯರು, ಪಾಲಕರು ಉಪಸ್ಥಿತರಿದ್ದರು. ದೇವೇಂದ್ರ ಶ್ರೀಯಾನ್ ನಿರೂಪಿಸಿದರು.