ಬೆಂಗಳೂರು: ಮಾನ್ಯತೆ ಪಡೆಯದೆ ಪ್ರವೇಶ ಪ್ರಕ್ರಿಯೆ ಆರಂಭಿಸಿರುವ ಜಯನಗರದ 5ನೇ ಬ್ಲಾಕ್ನಲ್ಲಿರುವ ಡಾನ್ ಬಾಸ್ಕೋ ಸ್ಕೂಲ್ ಆಫ್ ಮ್ಯಾನೇಜ್ವೆುಂಟ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯಬಾರದು ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯ ತಿಳಿಸಿದೆ.
ಡಾನ್ ಬಾಸ್ಕೋ ಸ್ಕೂಲ್ ಆಫ್ ಮ್ಯಾನೇಜ್ವೆುಂಟ್ ಕಾಲೇಜು ಬೆಂ, ನಗರ ವಿವಿಯಿಂದ ಸಂಯೋಜನೆ ಪಡೆಯದಿರುವುದರಿಂದ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯಬಾರದು. ಒಂದು ವೇಳೆ ಪಡೆದುಕೊಂಡರೆ, ವಿವಿ ಜವಾಬ್ದಾರಿಯಲ್ಲ ಎಂದು ಕುಲಸಚಿವ ಪ್ರೊ. ಶಿವರಾಮ್ ತಿಳಿಸಿದ್ದಾರೆ.
ಇದನ್ನೂ ಓದಿ: ನ್ಯಾಯಾಂಗ ತನಿಖೆಗೆ ನಕಾರ: ಕರೊನಾ ಉಪಕರಣ ಖರೀದಿ ಪ್ರಕರಣ
ಈ ಕಾಲೇಜಿನಲ್ಲಿ ಪಿಜಿ ಡಿಪ್ಲೊಮಾ ಇನ್ ಮಾರ್ಕೆಟಿಂಗ್, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಹಾಗೂ ಹಾಸ್ಪಿಟಿಲಿಟಿ ಅಡ್ಮಿನಿಸ್ಟ್ರೇಷನ್ ಕೋರ್ಸ್ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗಿರುವುದು ವಿವಿ ಗಮನಕ್ಕೆ ಬಂದಿದೆ.