ಕುಂದಾಪುರ: ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಗಂಗೊಳ್ಳಿಯ ಎಸ್.ವಿ. ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ವೈದ್ಯರ ದಿನ ಕಾರ್ಯಕ್ರಮ ಮಂಗಳವಾರ ನಡೆಯಿತು. ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿಕ್ಮರಿ ಅವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕೆ.ರಾಮನಾಥ್ ನಾಯಕ್, ಪ್ರದೀಪ್ ಡಿ.ಕೆ, ಉಮೇಶ್ ಮೇಸ್ತ, ಚಂದ್ರಕಲಾ ತಾಂಡೇಲ್, ಉದಯಶಂಕರ್ ರಾವ್, ವಾಸುದೇವ್ ಶೇರುಗಾರ್, ದಯಾನಂದ ಗಾಣಿಗ, ಗೋಪಾಲ್ ಬಿಲ್ಲವ, ಟಿ.ದಿನಕರ ಶೆಣೈ, ನಾರಾಯಣ ನಾಯ್ಕ, ಗಿರೀಶ್ ಖಾರ್ವಿ, ಎಂ.ನಾಗೇಂದ್ರ ಪೈ, ಜಗದೀಶ್ ಪೂಜಾರಿ, ರತ್ನಾ ದೇವಾಡಿಗ, ಸುಮಾ ಪೂಜಾರಿ ಉಪಸ್ಥಿತರಿದ್ದರು. ಕೃಷ್ಣ ಪೂಜಾರಿ ಸ್ವಾಗತಿಸಿದರು. ರಾಮನಾಥ ಚಿತ್ತಾಲ್ ವಂದಿಸಿದರು.