ಕುಕನೂರು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಪಿಎಸ್‌ಐ ಟಿ.ಗುರುರಾಜ ಮಾತನಾಡಿದರು. ಸಿಪಿಐ ಮೌನೇಶ್ವರ ಮಾಲಿ ಪಾಟೀಲ್, ಪಪಂ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ ಇದ್ದರು. 
ಜಿಲ್ಲೆ

ಡಿಜೆ ಬಳಕೆ ಕಡಿಮೆ ಮಾಡಿ

ಕುಕನೂರು; ಈದ್ ಮಿಲಾದ್ ಮತ್ತು ಗೌರಿ ಗಣೇಶ ಹಬ್ಬದಲ್ಲಿ ಶಾಂತಿಗೆ ಭಂಗ ತರುವಂತಹ ಕೆಲಸ ಯಾರು ಮಾಡಬಾರದು. ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಿಎಸ್‌ಐ ಟಿ.ಗುರುರಾಜ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಗಣೇಶ ಚತುರ್ಥಿ-ಈದ್ ಮಿಲಾದ್ ಹಬ್ಬದ ಶಾಂತಿಸಭೆಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿ 148ಗಣೇಶ ಮೂರ್ತಿಗಳು ಸ್ಥಾಪಿಸಲಾಗುತ್ತದೆ. 7ದಿನದ ಒಳಗಾಗಿ ಎಲ್ಲರೂ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು. ಕಡ್ಡಾಯವಾಗಿ ಪರವಾಣಿಗೆ ತೆಗೆದುಕೊಳ್ಳಬೇಕು. ಗಣೇಶ ಪ್ರತಿಷ್ಠಾಪಿಸುವಂತ ವಿವಿಧ ಸಂಘಗಳ ಸದಸ್ಯರು ಡಿಜೆ ಬಳಕೆ ಕಡಿಮೆ ಮಾಡಬೇಕು.

ಕೆಲವು ಡಿಜೆಯಲ್ಲಿ ಬೇರೆ ಬೇರೆ ಹಾಡು ಮತ್ತು ಇತರೆ ಸಮುದಾಯ ತೆಗಳುವಂತಹ ಹಾಡುಗಳನ್ನು ಹಾಕಬಾರದು. ನಿಗದಿತ ಸಮಯದೊಳಗೆ ಗಣೇಶ ವಿಸರ್ಜನೆ ಮಾಡಬೇಕು. ಇಲ್ಲವಾದರೆ ಟ್ರ್ಯಾಕ್ಟರ್, ಡಿಜೆ ಮತ್ತು ಆಪರೇಟರ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅದರ ಬದಲು ಇತರೆ ಕಲಾವಿದರನ್ನು ಕರೆಯಿಸಿ ಕಾರ್ಯಕ್ರಮಗಳನ್ನು ಮಾಡಬೇಕು. ಡಿಜೆಯಿಂದ ವೃದ್ಧರಿಗೆ, ಹೃದಯ ಸಂಬಂಧಿ ಕಾಯಿಲೆ ಇರುವಂತಹ ಜನರಿಗೆ, ಮಕ್ಕಳಿಗೆ ತುಂಬಾ ಸಮಸ್ಯೆಯಾಗುತ್ತದೆ ಎಂದರು.

ಸಿಪಿಐ ಮೌನೇಶ್ವರ ಮಾಲಿ ಪಾಟೀಲ್ ಮಾತನಾಡಿ, ಹಿಂದಿನ ವರ್ಷ ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆಯಲ್ಲಿ ಕೆಲವು ಘಟನೆಗಳು ನಡೆದಿವೆ. ಮತ್ತೆ ಅಂತಹ ಘಟನೆಗಳು ಮರುಕಳಿಸಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗವದು ಎಂದರು. ಪಪಂ ಮುಖ್ಯಾಧಿಕಾರಿ ನಭಿಸಾಬ ಕಂದಗಲ್, ಪ್ರಮುಖರಾದ ರಶೀದಸಾಬ್ ಹಣಜಗಿರಿ, ಕರಬಸಯ್ಯ ಬಿನ್ನಾಳ, ಶರಣಪ್ಪ ಚಲವಾದಿ, ಹನುಮಂತಪ್ಪ ಮುತ್ತಾಳ ಇತರರಿದ್ದರು.