ಕಾನಹೊಸಹಳ್ಳಿ ಸಮೀಪದ ಮಾಕನಡುಕು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 
ಜಿಲ್ಲೆ

ವಿಭಾಗೀಯ ಮಟ್ಟಕ್ಕೆ ಮಾಕನಡುಕು ಶಾಲೆ ಕಬಡ್ಡಿ ತಂಡ ಆಯ್ಕೆ

ಕಾನಹೊಸಹಳ್ಳಿ: ಸಮೀಪದ ಮಾಕನಡುಕು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಬಾಲಕರ ಕಬಡ್ಡಿ ಪಂದ್ಯದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಹೂವಿನಹಡಗಲಿ ತಾಲೂಕು ಕ್ರೀಡಾಂಗಣದಲ್ಲಿ ಈಚೆಗೆ ನಡೆದ ವಿಜಯನಗರ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಅಂತಿಮ ಆಟದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಡವನ್ನು ಮಣಿಸುವ ಮೂಲಕ ವಿಜಯ ಸಾಧಿಸಿದ್ದಾರೆ.

ಆಟಗಾರರನ್ನು ಗ್ರಾಮಸ್ಥರು ಪಟಾಕಿ ಸಿಡಿಸಿ, ಡೊಳ್ಳು, ತಮಟೆ ವಾದನದ ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಉಷಾರಾಣಿ, ಶಿಕ್ಷಕರಾದ ಕೃಷ್ಣಮೂರ್ತಿ, ಪೂಜಾರ್ ವೀರೇಶ್, ಶಿವು, ಭಾಗ್ಯಲಕ್ಷ್ಮೀ, ಪ್ರದೀಪ್, ಶಿವಪ್ಪನಾಯಕ,

ಸುಜಾತಾ, ಎಸ್ಡಿಎಂಸಿ ಅಧ್ಯಕ್ಷ ಮುದ್ದಪ್ಪ, ಗ್ರಾಪಂ ಸದಸ್ಯರಾದ ತಿಪ್ಪೇಸ್ವಾಮಿ, ವೈ.ಒ.ಬೋರೇಶ್, ಓಂಕಾರಗೌಡ, ಮುಖಂಡರಾದ ಆನಂದ, ರಮೇಶ್, ಮಾಕನಡುಕು ಕುಮಾರ್, ಸುಣಗಾರ ಪ್ರಕಾಶ್, ಲೋಕೇಶ್ ನಾಯಕ, ಚಿಕ್ಕುಂಟೆರ ಬಸವರಾಜ, ಪೂಜಾರಪ್ಪರ ಭಾಗ್ಯಮ್ಮ, ಟೈಲರ್ ಕೊಟ್ರೇಶ್ ಇದ್ದರು.