ಜಿಲ್ಲೆ

ಆರೋಗ್ಯವಂತ ಸಮಾಜಕ್ಕೆ ತಾಯಂದಿರ ಕೊಡುಗೆ : ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಶ್ಲಾಘನೆ

ಸೌಮ್ಯ ಆರ್

ಕಾಸರಗೋಡು: ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾಮಟ್ಟದ ಐಸಿಡಿಎಸ್ ಸೆಲ್ ಇತ್ತೀಚೆಗೆ ವಿಚಾರ ಸಂಕಿರಣ ಆಯೋಜಿಸಿತ್ತು.

ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಉದ್ಘಾಟಿಸಿ ಪ್ರತಿ ಮಗುವಿಗೆ ಹುಟ್ಟಿದ ಆರು ತಿಂಗಳವರೆಗೆ ತಾಯಿಹಾಲು ಮಾತ್ರ ನೀಡಬೇಕು. ಆರೋಗ್ಯವಂತ ನಾಗರಿಕರನ್ನು ರೂಪಿಸುವಲ್ಲಿ ಹಾಲುಣಿಸುವ ತಾಯಂದಿರ ಪಾತ್ರ ಮಹತ್ತರ ಎಂದರು.

ಕಾಸರಗೋಡು ಜಿಪಂ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಕೀಲೆ ಎಸ್.ಎನ್.ಸರಿತಾ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜನರಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಬಿ.ನಾರಾಯಣ ನಾಯ್ಕ ಹಾಗೂ ವೆಳ್ಳರಿಕುಂಡ್ ತಾಲೂಕು ಆಸ್ಪತ್ರೆ ಡಯಟಿಷಿಯನ್ ಮೃದುಲಾ ಅರವಿಂದ್ ತರಗತಿ ನಡೆಸಿದರು.

ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ.ರಾಜ್, ಸಿಡಿಪಿಒಗಳು, ಅಂಗನವಾಡಿ ಕಾರ್ಯಕರ್ತೆಯರು, ಹಾಲುಣಿಸುವ ತಾಯಂದಿರು, ಗರ್ಭಿಣಿಯರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿ.ಎಸ್.ಶಿಮ್ನಾ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶೈನಿ ಐಸಾಕ್ ವಂದಿಸಿದರು.