ಕಾಸರಗೋಡು: ಸಮಗ್ರ ಶಿಕ್ಷಣ ಗುಣಮಟ್ಟ ಯೋಜನೆಯ ಜಿಲ್ಲಾ ಮಟ್ಟದ ಘೋಷಣೆ ಮತ್ತು ಸಮಿತಿ ರಚನಾ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು. ಜಿಪಂ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಲಾ ಅಧ್ಯಕ್ಷತೆ ವಹಿಸಿದ್ದರು.
ಸಹಾಯಕ ಜಿಲ್ಲಾಧಿಕಾರಿ ಪಿ.ಸುರ್ಜಿತ್, ಸಮಗ್ರ ಶಿಕ್ಷಾ ಕೇರಳ ಡಿಪಿಸಿವಿಎಸ್ ಬಿಜುರಾಜ್ ಸಮಗ್ರ ಶಿಕ್ಷಣ ಗುಣಮಟ್ಟ ಯೋಜನೆಯ ದಾಖಲೆ ಮಂಡಿಸಿದರು. ಕುಂಬ್ಡಾಜೆ ಗ್ರಾಪಂ ಅಧ್ಯಕ್ಷ ಪಿ.ಹಮೀದ್, ಡಯಟ್ ಪ್ರಾಂಶುಪಾಲ ರಘುರಾಮ ಭಟ್, ಕೈಟ್ ಜಿಲ್ಲಾ ಸಂಯೋಜಕಿ ರೋಜಿ ಜೋಸೆಫ್, ವಿದ್ಯಾಕರಣಂ ಜಿಲ್ಲಾ ಸಂಯೋಜಕ ಸುನೀಲ್ ಕುಮಾರ್ ಮತ್ತು ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಟಿ.ವಿ.ಮಧುಸೂದನನ್ ಸ್ವಾಗತಿಸಿದರು. ವಿಎಚ್‌ಎಸ್‌ಇ ಸಹಾಯಕ ನಿರ್ದೇಶಕಿ ಇ.ಆರ್.ಉದಯಕುಮಾರಿ ವಂದಿಸಿದರು.