ಮಸ್ಕಿ: ಮೇ ಐದರಿಂದ 17ರವರೆಗೆ ಜಾತಿಗಣತಿ ನಡೆಯುತ್ತಿದ್ದು, ಬಲಗೈ ಪಂಗಡದ ಛಲವಾದಿ ಸಮುದಾಯ ಛಲವಾದಿ ಬಲಗೈ ಎಂದು ಬರೆಸುವಂತೆ ತಾಲೂಕು ಛಲುವಾದಿ ಸಮಾಜದ ಅಧ್ಯಕ್ಷ ಬಾಲರಾಜ್ ವಿರುಪಾಪುರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು. ಛಲುವಾದಿ ಸಮಾಜದವರು ಜಾತಿ ಕಲಂನಲ್ಲಿ ಛಲುವಾದಿ ಎಂದು ಉಪಜಾತಿ ಕಲಂನಲ್ಲಿ ಬಲಗೈ ಪಂಗಡ ಎಂದು ಬರೆಸಿ ಈ ಕುರಿತು ರಾಜ್ಯ ಸಮಿತಿ ಮತ್ತು ಜಿಲ್ಲಾ ಸಮಿತಿ ಸೂಚನೆ ಇದ್ದು ಪ್ರತಿಯೊಬ್ಬರು ಇದನ್ನು ಪಾಲಿಸಿ ಎಂದರು.
ಪ್ರಧಾನ ಕಾರ್ಯದರ್ಶಿ ಯಂಕಪ್ಪ ಬಸಾಪುರ, ಗೌರವ ಅಧ್ಯಕ್ಷ ಹುಚ್ಚಪ್ಪ ಬಸಾಪುರ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಬಳಗಾನೂರು, ಪ್ರಮುಖರಾದ ರಮೇಶ ಕೊಲಮಿ, ದುರುಗಪ್ಪ ಬಸ್ಸಾಪುರ ಇದ್ದರು.