ದೇವದಾಸ್ ಶೆಟ್ಟಿ 
ಜಿಲ್ಲೆ

ದೇವದಾಸ್ ಶೆಟ್ಟಿಗೆ ಜಿಲ್ಲಾ ಕಸಾಪ ಪುರಸ್ಕಾರ

ಇಂದಿರಾ ಎನ್ ಕೆ

ಪಡುಬಿದ್ರಿ: ಸಮಗ್ರ ಗ್ರಾಮೀಣ ಆಶ್ರಮ ಸಂಸ್ಥೆ ರೂವಾರಿ, ನೆಲಮೂಲ ಪಾರಂಪರಿಕ ಹಿನ್ನೆಲೆಯ ಕೊರಗ ಸಮುದಾಯದ ಶ್ರೇಯೋಭಿವೃದ್ಧಿಗೆ ತನ್ನ ಸಮಸ್ತ ಜೀವನವನ್ನೇ ಮುಡಿಪಾಗಿರಿಸಿದ ಕಾಪು ಕಲ್ಯಾ ದೇವದಾಸ್ ಶೆಟ್ಟಿ ಅವರಿಗೆ ಅ.19ರಂದು ಸಂಜೆ 4 ಗಂಟೆಗೆ ಕಲ್ಯಾದಲ್ಲಿ ನಡೆಯುವ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಆಮಂತ್ರಣ ಬಿಡುಗಡೆ: ಪಾಂಗಾಳ ಬಾಬು ಕೊರಗ ಸರ್ವಾಧ್ಯಕ್ಷತೆಯಲ್ಲಿ ಪಲಿಮಾರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನ.16ರಂದು ಸಾಮಾಜಿಕ ತಲ್ಲಣಗಳಿಗೆ ಸಾಹಿತ್ಯಿಕ ಪ್ರತಿಸ್ಪಂದನೆ ಪರಿಕಲ್ಪನೆಯಲ್ಲಿ ನಡೆಯಲಿರುವ ಕಾಪು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ನೆಲದುಲಿಯನ್ನು ದೇವದಾಸ್ ಶೆಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ತಿಳಿಸಿದ್ದಾರೆ.