ವಿವಿಧ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು 
ಜಿಲ್ಲೆ

ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಗೌರವ

ಇಂದಿರಾ ಎನ್ ಕೆ

ಕೊಕ್ಕರ್ಣೆ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆಪಿಎಸ್ ಶಾಲೆಯ ಶಿಕ್ಷಕ ಭಾಸ್ಕರ ಪೂಜಾರಿ, ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ವರದರಾಜ್, ದುರ್ಗಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಶ್ರೀವೇಣಿ ರಾವ್ ಅವರನ್ನು ಗೌರವಿಸಲಾಯಿತು.

ಕೊಕ್ಕರ್ಣೆ ಗ್ರಾಪಂ ಅಧ್ಯಕ್ಷ ಜಯಂತ ಪೂಜಾರಿ, ಬ್ರಹ್ಮಾವರ ಕ್ಷೇತ್ರದ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್, ಗ್ರಾಪಂ ಸದಸ್ಯರಾದ ವಸಂತ ಸೇರ್ವೇಗಾರ್, ಪ್ರಜ್ವತ್ ಕೆಎಸ್, ಎಸ್‌ಡಿಎಂಸಿ.ಉಪಾಧ್ಯಕ್ಷ ಉದಯ ನಾಯಕ್, ಪ್ರಾಂಶುಪಾಲ ಪ್ರಕಾಶ್ ಶೆಟ್ಟಿ, ಉಪಪ್ರಾಂಶುಪಾಲ ಈಶ್ವರ ಅಂಬಿಗ, ನಿವೃತ್ತ ಶಿಕ್ಷಕ ಸಂಜೀವ ಮಾಸ್ಟರ್, ಬಿಆರ್‌ಪಿ ಉದಯ ಕೋಟ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗುಣಕರ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ಮರಕಾಲ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ವಸಂತ ನಾಯ್ಕ ಒಳಬೈಲು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಉಪಾಧ್ಯಕ್ಷ ವನಿತಾ ಶೆಟ್ಟಿ, ಸಿಆರ್‌ಪಿ ಪ್ರತಿಭಾ, ಮುಖ್ಯಶಿಕ್ಷಕಿ ಇಂದಿರಾ ಮತ್ತಿತರರು ಉಪಸ್ಥಿತರಿದ್ದರು.