ಲಿಂಗಸುಗೂರು ಸಮೀಪದ ದೇವರಭೂಪುರ ಸಹಿಪ್ರಾ ಶಾಲಾ ಮಕ್ಕಳಿಗೆ ಶಿಕ್ಷಕರು ಮತ್ತು ಹಳೇ ವಿದ್ಯಾರ್ಥಿಗಳು ಟೈ-ಬೆಲ್ಟ್ ವಿತರಿಸಿದರು. ಶಿಕ್ಷಕರಾದ ಮಹಾನಂದ, ಸಂಗಮೇಶ ವಸ್ತ್ರದ್, ರೇಖಾ ಬಡಿಗೇರ, ಶಾರದಾ, ಹಳೇ ವಿದ್ಯಾರ್ಥಿಗಳಾದ ವಿಶ್ವನಾಥ ಹೂಗಾರ, ನಾಗರಾಜ ಬಡಿಗೇರ, ಯಂಕನಗೌಡ, ಈರಣ್ಣ ಶೆಟ್ಟಿ, ರಮೇಶ ಭಜಂತ್ರಿ, ಮಂಜುನಾಥ ನಾಯಕ, ದುರುಗಣ್ಣ ನಾಯಕ, ದ್ಯಾಮಣ್ಣ ಇತರರಿದ್ದರು. 
ಜಿಲ್ಲೆ

ಹಳೇ ವಿದ್ಯಾರ್ಥಿಗಳಿಂದ ಟೈ-ಬೆಲ್ಟ್ ವಿತರಣೆ

ಗಾಯತ್ರಿ ಮಾಲಿಪಾಟೀಲ್

ಲಿಂಗಸುಗೂರು: ತಾಲೂಕಿನ ದೇವರಭೂಪುರ ಸಹಿಪ್ರಾ ಶಾಲಾ ಮಕ್ಕಳಿಗೆ ಶಿಕ್ಷಕರು ಹಾಗೂ ಹಳೇ ವಿದ್ಯಾರ್ಥಿಗಳಿಂದ ಸೋಮವಾರ ಟೈ ಮತ್ತು ಬೆಲ್ಟ್‌ಗಳನ್ನು ವಿತರಿಸಲಾಯಿತು.

ಮುಖ್ಯಶಿಕ್ಷಕ ದಾವಲಸಾಬ ಮಾತನಾಡಿ, ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವ ಜತೆ ಗುಣಮಟ್ಟದ ಶಿಕ್ಷಣದ ಅವಶ್ಯಕತೆ ಇದೆ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದ್ದರಿಂದ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಶಿಕ್ಷಕರ ಪಾತ್ರ ಮುಖ್ಯ. ಸರ್ಕಾರ ಮಕ್ಕಳಿಗಾಗಿ ಉಚಿತ ಸಮವಸ್ತ್ರ, ಶೂ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸಿದೆ. ವಿದ್ಯಾರ್ಥಿಗಳ ಶಿಸ್ತು ಹೆಚ್ಚಿಸಲು ಶಿಕ್ಷಕರು ಮತ್ತು ಹಳೇ ಬೇರು ಹೊಸ ಚಿಗುರು ಸಂಘದ ಹಳೇ ವಿದ್ಯಾರ್ಥಿಗಳು ಸ್ವಂತ ಹಣದಲ್ಲಿ ಟೈ ಮತ್ತು ಬೆಲ್ಟ್‌ಗಳನ್ನು ವಿತರಿಸಿರುವುದು ಇತರರಿಗೆ ಮಾದರಿಯಾಗಿದೆ.

ಶಿಕ್ಷಕರಾದ ಮಹಾನಂದ, ಸಂಗಮೇಶ ವಸ್ತ್ರದ್, ರೇಖಾ ಬಡಿಗೇರ, ಶಾರದಾ, ಹಳೇ ವಿದ್ಯಾರ್ಥಿಗಳಾದ ವಿಶ್ವನಾಥ ಹೂಗಾರ, ನಾಗರಾಜ ಬಡಿಗೇರ, ಯಂಕನಗೌಡ, ಈರಣ್ಣ ಶೆಟ್ಟಿ, ರಮೇಶ ಭಜಂತ್ರಿ, ಮಂಜುನಾಥ ನಾಯಕ, ದುರುಗಣ್ಣ ನಾಯಕ, ದ್ಯಾಮಣ್ಣ ಇತರರಿದ್ದರು.