ಕೋಟ: ಕೋಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಂದಟ್ಟು ಕಾಮಧೇನು ವಿವಿಧೋದ್ದೇಶ ಸಹಕಾರಿ ಸಂ ಕೊಡವಾಡಿದ ಕಲಿಕೋಪಕರಣವನ್ನು ಇತ್ತೀಚಿಗೆ ವಿತರಿಸಲಾಯಿತು.
ನಿವೃತ್ತ ಮುಖ್ಯಶಿಕ್ಷಕಿ ಕಮಲಾ ಮಯ್ಯ ನೀಡಿದ ಐಡಿ ಕಾರ್ಡ್, ವಕೀಲರಾದ ಮಹೇಶ್ ಹಂದಟ್ಟು ನೀಡಿದ ಬ್ಯಾಗ್ ಹಾಗೂ ಒಂದನೇ ತರಗತಿ ವಿದ್ಯಾರ್ಥಿಗಳಿಗೆ ಉಪೇಂದ್ರ ಸೋಮಯಾಜಿ ಚಿತ್ರಪಾಡಿ ಅವರು 1 ಸಾವಿರ ರೂ. ಮೊತ್ತದ ನಿಖರ ಠೇವಣಿಯನ್ನು ವಿತರಿಸಲಾಯಿತು.
ಕೋಟ ಹಂದಟ್ಟು ಕಾಮಧೇನು ವಿವಿಧೋದ್ದೇಶ ಸಹಕಾರಿ ಸಂ ಅಧ್ಯಕ್ಷೆ ಶಾಂತಾ ಭಟ್ ಪಾಂಡೇಶ್ವರ, ಸಂಸ್ಥೆ ಕಾನೂನು ಸಲಹೆಗಾರ ಮಂಜುನಾಥ್ ಎಸ್.ಕೆ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕೆ.ನಾಯಕ್, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಂ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸವಿತಾ, ವಾಹನ ಸಮಿತಿ ಅಧ್ಯಕ್ಷ ಉಪೇಂದ್ರ ಸೋಮಯಾಜಿ ಚಿತ್ರಪಾಡಿ, ಎಸ್‌ಡಿಎಂಸಿ ಅಧ್ಯಕ್ಷೆ ಮಹಾಲಕ್ಷ್ಮೀ ಸೋಮಯಾಜಿ, ಶಿಕ್ಷಕರು, ಪಾಲಕರು ಉಪಸ್ಥಿತರಿದ್ದರು.
ಉನ್ನತಿ.ಹಂದಟ್ಟು ಸ್ವಾಗತಿಸಿದರು. ಸಾನ್ವಿ ವಂದಿಸಿದರು. ವಿದ್ಯಾರ್ಥಿ ಅನುಜ್ಞಾ ನಿರೂಪಿಸಿದರು. ಮುಖ್ಯಶಿಕ್ಷಕಿ ಪುಷ್ಪಾವತಿ ಹೊಳ್ಳ ಸಂಯೋಜಿಸಿದರು.