ಜಿಲ್ಲೆ

ರಾಯಿ ಶಾಲೆಯಲ್ಲಿ ಕಲಿಕಾ ಸಾಮಗ್ರಿ ವಿತರಣೆ

ಸೌಮ್ಯ ಆರ್

ಬಂಟ್ವಾಳ: ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸಂ ಸಂಸ್ಥೆಗಳು ಮತ್ತು ದಾನಿಗಳು ವಿದ್ಯಾರ್ಥಿಗಳಿಗೆ ನೀಡಿದ ವಿವಿಧ ಕೊಡುಗೆ ಹಸ್ತಾಂತರಿಸಲಾಯಿತು.

ಬೆಂಗಳೂರು ಯೂತ್ ಫಾರ್ ಸೇವಾ ಸಂಸ್ಥೆ ಮತ್ತು ಇಡಿಆರ್‌ಟಿ ಸಂಸ್ಥೆ ಸೇರಿದಂತೆ ಇಲ್ಲಿನ ಹಳೇ ವಿದ್ಯಾರ್ಥಿ ಸಂ, ನಿವೃತ್ತ ಮುಖ್ಯ ಶಿಕ್ಷಕ ಕೆ.ರಮೇಶ ನಾಯಕ್ ರಾಯಿ, ಉದ್ಯಮಿ ಸುನೀಲ್ ಗೌಡ ಮುದ್ದಾಜೆ, ಕೃಷಿಕ ದಂಪತಿ ಜಯಂತಿ ಮತ್ತು ಹರಿಯಪ್ಪ ಶೆಟ್ಟಿ ಐತೇರಿ ಮತ್ತಿತರರು ಸೇರಿಕೊಂಡು ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ವೆಚ್ಚದಲ್ಲಿ ಉಚಿತ ಸಮವಸ, ಪುಸ್ತಕ, ಕೊಡೆ, ಬ್ಯಾಗ್, ಕಲರ್ ಬಾಕ್ಸ್, ಪೆನ್, ಪೆನ್ಸಿಲ್ ಹೀಗೆ ವರ್ಷವಿಡೀ ಬಳಕೆಗೆ ಅಗತ್ಯವಿರುವಷ್ಟು ಶೈಕ್ಷಣಿಕ ಸಾಮಗ್ರಿಗಳನ್ನು ಭಾನುವಾರ ವಿತರಿಸಿದರು.

ಇದೇ ವೇಳೆ ಪ್ರಸಕ್ತ ಸಾಲಿನಲ್ಲಿ ಒಂದನೇ ತರಗತಿಗೆ ಸೇರ್ಪಡೆಗೊಂಡ ಹೊಸ ವಿದ್ಯಾರ್ಥಿಗಳ ಹೆಸರಿನಲ್ಲಿ ಮುಖ್ಯ ಶಿಕ್ಷಕಿ ಜಾನೆಟ್ ಕಾನ್ಸೆಸೊ ತಲಾ 1 ಸಾವಿರ ರೂ. ಮೊತ್ತದ ನಗದು ಠೇವಣಿ ಇರಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಚಂದ್ರಾವತಿ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಕೆ.ರಮೇಶ ನಾಯಕ್ ರಾಯಿ, ಪ್ರಗತಿಪರ ಕೃಷಿಕ ಜಿ.ರಾಮಸುಂದರ ಗೌಡ, ಸ್ವಾಮಿ ವಿವೇಕಾನಂದ ಟ್ರಸ್ಟ್ ಅಧ್ಯಕ್ಷ ಕೆ.ಪರಮೇಶ್ವರ ಪೂಜಾರಿ, ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ಸಮಿತ್ ಶಿವನಗರ ಶುಭಹಾರೈಸಿದರು.

ಸಹಶಿಕ್ಷಕಿ ಬೇಬಿ ಅರಳ ಸ್ವಾಗತಿಸಿದರು. ಗೌರವ ಶಿಕ್ಷಕಿ ನಿಖಿತಾ ವಂದಿಸಿದರು. ಶಿಕ್ಷಕ ಸಿದ್ದಪ್ಪ ಕಡೂರು ನಿರೂಪಿಸಿದರು.