ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಐತ್ತೂರು ಸುಂಕದಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 5 ಜೊತೆ ಬೆಂಚ್, ಡೆಸ್ಕ್‌ಗಳನ್ನು ವಿತರಿಸಲಾಯಿತು.
ಯೋಜನೆಯ ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಶಾಲಾಭಿವೃದ್ಧಿ ಸಮಿತಿಯವರಿಗೆ ಹಸ್ತಾಂತರಿಸಿ ಮಾತನಾಡಿ, ಮಕ್ಕಳ ವಿದ್ಯಾರ್ಜನೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ದೊರೆತಂತಾಯಿತು. ಗುಣಮಟ್ಟದ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಆಸನದ ವ್ಯವಸ್ಥೆಯೂ ಬಹುಮುಖ್ಶವಾಗಿದೆ ಎಂದರು.
ಶಾಲಾಭಿವೃದ್ಧಿ ಸದಸ್ಯ ಆಜಿಜ್ ಅಧ್ಯಕ್ಷತೆ ವಹಿಸಿದ್ದರು. ಐತ್ತೂರು ಗ್ರಾಪಂ ಮಾಜಿ ಅಧ್ಯಕ್ಷೆ ಶ್ಯಾಮಲಾ ಕೆ., ಐತ್ತೂರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಗಣೇಶ್ ಬಿ., ಒಕ್ಕೂಟದ ಸದಸ್ಯರಾದ ಗಿರಿಜಾ ಕೆ., ಉಮಾವತಿ ಕೆ., ದೀಕ್ಷಿತಾ ಮುಜೂರು, ತನಿಯಪ್ಪ ಪೂಜಾರಿ, ಶಿಕ್ಷಕರಾದ ವ್ನಿೇಶ್, ನಿತ್ಯ, ಪೂರ್ಣಿಮಾ ಉಪಸ್ಥಿತರಿದ್ದರು. ಹಳೇ ವಿದ್ಯಾರ್ಥಿ ಸಂಘದ ಸದಸ್ಯ ಇಸ್ಮಾಯಿಲ್ ಪ್ರಾಸ್ತಾವಿಸಿದರು. ಮುಖ್ಯಶಿಕ್ಷಕ ಸುಜಾತಾ ಕೆ.ಸ್ವಾಗತಿಸಿದರು, ಶಿಕ್ಷಕಿ ಸುಂದರಿ ಎ.ವಂದಿಸಿದರು