ಜಿಲ್ಲೆ

ಕ್ಷಯ ರೋಗಿಗಳಿಗೆ ಆಹಾರ , ಡಯಾಲಿಸಿಸ್ ಕಿಟ್ ವಿತರಣೆ

ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯಿತಿ ಕುಟುಂಬ ಆರೋಗ್ಯ ಕೇಂದ್ರದ ವತಿಯಿಂದ 2024-25ನೇ ವಾರ್ಷಿಕ ಯೋಜನೆಯಂತೆ ಕ್ಷಯ ರೋಗಿಗಳಿಗಿರುವ ಪೌಷ್ಟಿಕ ಆಹಾರ ಕಿಟ್ ಹಾಗೂ ಡಯಾಲಿಸಿಸ್ ಕಿಟ್ ವಿತರಣೆ ಪಂಚಾಯಿತಿ ಮಟ್ಟದ ಉದ್ಘಾಟನೆ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಜರುಗಿತು.

ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಕಿಟ್ ವಿತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಪಂಚಾಯಿತಿ ವಿವಿಧ ಯೋಜನೆಗಳನ್ನು ಕೈಗೊಂಡಿದ್ದು ಇದರಂತೆ ಕ್ಷಯರೋಗಿಗಳಿಗೆ 2.5 ಲಕ್ಷ ಹಾಗೂ ಡಯಾಲಿಸ್‌ಗೆ 2 ಲಕ್ಷ ರೂ. ವ್ಯಯಿಸಿ ಕಿಟ್ ವಿತರಿಸುವ ಮೂಲಕ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದೆ ಎಫ್‌ಎಚ್‌ಸಿಯನ್ನು ಸಂದರ್ಶಿಸುವ ರೋಗಿಗಳಿಗೆ ಮತ್ತು ಪಂಚಾಯಿತಿ ವ್ಯಾಪಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೂ ಯೋಜನೆ ರೂಪಿಸಲಾಗುವುದು ಎಂದರು.

ಗ್ರಾ.ಪಂ.ಉಪಾಧ್ಯಕ್ಷೆ ರಮ್ಲ ಅಧ್ಯಕ್ಷತೆ ವಹಿಸಿದ್ದರು. ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂ.ಸದಸ್ಯೆ ರೂಪವಾಣಿ ಆರ್.ಭಟ್, ಉಷಾ ಕುಮಾರಿ, ಕೇಂದ್ರದ ವೈದಾಧಿಕಾರಿ ಡಾ.ಗ್ರೀಷ್ಮ, ಹೆಲ್ತ್ ಇನ್ಸ್‌ಪೆಕ್ಟರ್ ವಸಂತ ಕುಮಾರ್ ಉಪಸ್ಥಿತರಿದ್ದರು. ಪಿಎಚ್‌ಎನ್ ಶಾಂತ ವಂದಿಸಿದರು.