ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಕಳಕಳಿ ಕಾರ್ಯಗಳೆಲ್ಲ ಶ್ಲಾಘನೀಯ. ರಾಜ್ಯಾದ್ಯಂತ ಶೌರ್ಯ ವಿಪತ್ತು ಘಟಕ ತಂಡ ರಚಿಸಿ ನೆರವು ನೀಡುವುದರ ಮೂಲಕ ಸಾಮಾಜಿಕ ಕಾಳಜಿ ಕಾಣಬಹುದು ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು. ಕರ್ಜೆ ಗ್ರಾಪಂ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಇನಕರ ಶೆಟ್ಟಿ ನೇತೃತ್ವದಲ್ಲಿ ಪ್ರಾಕೃತಿಕ ವಿಕೋಪ, ಯೋಜನೆಯ ಅನುದಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿ.ಸಿ.ಟ್ರಸ್ಟ್ ಕರಾವಳಿ ಪ್ರಾದೇಶಿಕ ಕಚೇರಿ ನಿರ್ದೇಶಕ ದುಗ್ಗೆ ಗೌಡ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹರೀಶ್ ಶೆಟ್ಟಿ ಚೇರ್ಕಾಡಿ, ವಲಯಾಧ್ಯಕ್ಷ ಮನೋಜ್ ಶೆಟ್ಟಿ, ಯೋಜನಾಧಿಕಾರಿ ಲೀಲಾವತಿ, ಜನಜಾಗೃತಿ ವೇದಿಕೆ ಹೆಬ್ರಿ ಪದಾಧಿಕಾರಿ ರಮಾಕಾಂತ ಕಾಮತ್, ವಲಯಾಧ್ಯಕ್ಷ ಹರೀಶ್ ನಾಯ್ಕ, ಒಕ್ಕೂಟ ಅಧ್ಯಕ್ಷೆ ಛಾಯಾ, ಶೌರ್ಯ ಘಟಕ ಚೇರ್ಕಾಡಿ ವಲಯಾಧ್ಯಕ್ಷ ಸತೀಶ್ ನಾಯಕ್, ನಿವೃತ್ತ ಅಧ್ಯಾಪಕ ಜಯರಾಮ ಶೆಟ್ಟಿ, ಬ್ರಹ್ಮಾವರ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜೀವ ಕುಲಾಲ್, ಪೂಜಾ ಸಮಿತಿ ಅಧ್ಯಕ್ಷ ಜನನಿ ದಿವಾಕರ ಶೆಟ್ಟಿ, ಉಪವಲಯ ಅರಣ್ಯಾಧಿಕಾರಿ ರಮೇಶ್, ಸಿಂಡಿಕೇಟ್ ರೈತ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಗ್ರಾಪಂ ಸದಸ್ಯ ರಘು, ಶೌರ್ಯ ಘಟಕ ಸದಸ್ಯರು, ಸಂಘ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಸೇವಾಪ್ರತಿನಿಧಿ ಅರಣ್ಯಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಜ್ಯೋತಿ ಸ್ವಾಗತಿಸಿದರು. ಮೇಲ್ವಿಚಾರಕಿ ಆಶಾಲತಾ ನಿರೂಪಿಸಿದರು.