ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಶಿವನಾದ ಕಾರ್ಯಕ್ರಮದಲ್ಲಿ ಶಾಂತಾ ಭಟ್, ಮಹೇಶ್, ಸದಾಶಿವ ಪೂಜಾರಿ ಪಾಂಡೇಶ್ವರ, ವಿಠ್ಠಲ್ ಶೆಟ್ಟಿಗಾರ್ ಅವರಿಗೆ ಶಿವಕೃಪಾ ಪುರಸ್ಕಾರ ನೀಡಿ ಗೌರವಿಸಲಾಯಿತು.  
ಜಿಲ್ಲೆ

ಮಕ್ಕಳ ಧಾರ್ಮಿಕ ಚಿಂತನೆ ಪ್ರಸಾರ

ಇಂದಿರಾ ಎನ್ ಕೆ

ಕೋಟ: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಕ್ಷೀಣಿಸುತ್ತಿದೆ ಇದಕ್ಕೆ ಕಾರಣ ಪಾಲಕರು. ಇದರಿಂದ ಮನುಕುಲದಲ್ಲಿ ಭಯಭಕ್ತಿ ಇನ್ನಿಲ್ಲವಾಗಿದೆ ಇದು ಮಾರಕ. ನಮ್ಮ ಹಿರಿಯರು ಧಾರ್ಮಿಕತೆ ಮೂಲಕ ನಮ್ಮನ್ನು ಗಟ್ಟಿಗೊಳಿಸಿದ್ದಾರೆ. ಅದೇ ರೀತಿ ಇಂದು ಪಾಲಕರು ಮಕ್ಕಳ ಧಾರ್ಮಿಕ ಚಿಂತನೆ ಪಸರಿಸಬೇಕು ಎಂದು ದಿವ್ಯಾಂಗ ರಕ್ಷಣಾ ಸಮಿತಿ ಸಂಚಾಲಕ ವಿಜಯ ಕೊಡವೂರು ಹೇಳಿದರು.

ಸಾಸ್ತಾನದ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಳಿ ಶಿವಕೃಪಾ ಯುವಕ ಮಂಡಲದ ಆಶ್ರಯದಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಶಿವನಾದ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

ಪಾಂಡೇಶ್ವರ ಯೋಗಗುರುಕುಲ ಮುಖ್ಯಸ್ಥ ಡಾ.ವಿಜಯ ಮಂಜರ್ ಧಾರ್ಮಿಕ ಪ್ರವಚನಗೈದರು. ಪಿಡಿಒ ಚಂದ್ರಕಾಂತ್ ಹೊಂಬಾಡಿ ಉದ್ಘಾಟಿಸಿದರು. ಸಹಕಾರಿ ಕ್ಷೇತ್ರ ಸಾಧಕಿ ಶಾಂತಾ ಭಟ್, ಮೆಸ್ಕಾಂ ವಿಭಾಗದ ಮಹೇಶ್, ಕೃಷಿಕ ಸದಾಶಿವ ಪೂಜಾರಿ ಪಾಂಡೇಶ್ವರ, ಕ್ರೀಡಾ ಕ್ಷೇತ್ರದ ಸಾಧಕ ವಿಠ್ಠಲ್ ಶೆಟ್ಟಿಗಾರ್ ಅವರಿಗೆ ಶಿವಕೃಪಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಉದ್ಯಮಿ ನಾಗೇಶ್ ಪೈ ಸಾಸ್ತಾನ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ತಾಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ, ಧಾರ್ಮಿಕ ಮಖಂಡ ಜಗದೀಶ್ ತುಂಗ, ನಾಗರಾಜ ತುಂಗ, ಭಾಸ್ಕರ ತುಂಗ, ಶಿವಕೃಪಾ ಯುವಕ ಮಂಡಲ ಅಧ್ಯಕ್ಷ ರಾಜೇಶ್ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು.