ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ಹಿರೇಮಠದ ಧರ್ಮಾಧಿಕಾರಿ ಲಿಂಗೈಕ್ಯ ಮಲ್ಲಿಕಾರ್ಜುನ ಸ್ವಾಮಿಗಳ ಶ್ರದ್ಧಾಂಜಲಿ ಸಮಾರಂಭವನ್ನು ಉಜ್ಜಿನಿ ಶ್ರೀಗಳು ಉದ್ಘಾಟಿಸಿದರು. ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಕಲ್ಮಠ ರಾಮಘಟ್ಟ ಪುರವರ್ಗ ಮಠದ ರೇವಣಸಿದ್ದೇಶ್ವರ ಶ್ರೀಗಳು, ದುಗ್ಗಾವತಿ ಹಿರೇಮಠದ ವೀರಭದ್ರೇಶ್ವರ, ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಜಿ ಇತರರಿದ್ದರು. 
ಜಿಲ್ಲೆ

ಮಠಗಳು ಅಂಧಕಾರವನ್ನು ಹೋಗಲಾಡಿಸಲಿವೇ

Kopala - Desk - Eraveni

ಹರಪನಹಳ್ಳಿ: ಮಠಗಳು ಜನರಿಗೆ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವುದರ ಜತೆಗೆ ಸತ್ಯ ಮತ್ತು ಅಸತ್ಯಗಳ ವ್ಯತ್ಯಾಸ ಹಾಗೂ ಒಳಿತು ಮತ್ತು ಕೆಡಕುಗಳ ಭಿನ್ನತೆ ತಿಳಿಸುವ ಶಕ್ತಿಕೇಂದ್ರಗಳಾಗಿವೆ ಎಂದು ಉಜ್ಜಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ದುಗ್ಗಾವತಿ ಗ್ರಾಮದ ಹಿರೇಮಠದ ಧರ್ಮಾಧಿಕಾರಿ ಲಿಂಗೈಕ್ಯ ಮಲ್ಲಿಕಾರ್ಜುನ ಸ್ವಾಮಿಗಳ ಶ್ರದ್ಧಾಂಜಲಿ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.

ಮಠಗಳು ಜನರ ಜೀವನ ಮಟ್ಟವನ್ನು ಧಾರ್ಮಿಕ, ಆರ್ಥಿಕ, ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸುಧಾರಿಸುವ ಕ್ಷೇತ್ರಗಳಾಗಿವೆ. ಯಾವುದೇ ಮಠ, ಪೀಠಗಳು ಭಕ್ತರ ಹೊರತಾಗಿಲ್ಲ. ಭೋಧನೆ ಮಾಡುವ ಗುರು, ಕೇಳುವ ಶಿಷ್ಯರು ಇದ್ದರೆ ಮಾತ್ರ ಮಠವಾಗುತ್ತೆ.

ಭಕ್ತರೇ ಮಠಕ್ಕೆ ನಿಜವಾದ ಆಸ್ತಿ. ಶ್ರೀಶೈಲ ಪೀಠದ ಶಾಖಾ ಹಿರೇಮಠದ ಲಿಂಗೈಕ್ಯ ಮಲ್ಲಿಕಾರ್ಜುನ ಸ್ವಾಮಿಗಳು ಭಕ್ತರ ಹಿತ ಕಾಯುವ ನಿಟ್ಟಿನಲ್ಲಿ ಕೆಲಸಗಳನ್ನು ಮಾಡಿದ್ದಾರೆ, ಹಾಗಾಗಿ ಭಕ್ತರು ಮಠದ ಅಭಿವೃದ್ಧಿಗೆ ಶ್ರಮಿಸಿ ಎಂದರು.

ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ಶ್ರೀವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಕಲ್ಮಠ, ರಾಮಘಟ್ಟ ಪುರವರ್ಗ ಮಠದ ರೇವಣಸಿದ್ದೇಶ್ವರ ಶ್ರೀಗಳು, ದುಗ್ಗಾವತಿ ಹಿರೇಮಠದ ವೀರಭದ್ರೇಶ್ವರ ಸ್ವಾಮಿ, ಹಿರೇಕುರುತ್ತಿ ಸಿದ್ಧಿ ನಂದೀಶ್ವರ ಶಿವಾಚಾರ್ಯ ಸ್ವಾಮಿ, ನೀಲಗುಂದ ಮಠದ ಚನ್ನಬಸವ ಸ್ವಾಮೀಜಿ, ಅಡವಿಹಳ್ಳಿ ಮಠದ ವೀರಾಗಂಗಾಧರ ಸ್ವಾಮೀಜಿ ಇತರರಿದ್ದರು.