ಕಾಸರಗೋಡು: ಯುವ ವಕೀಲೆ, ಕುಂಬಳೆ ಸನಿಹದ ಮುಟ್ಟಂ ಬೇರಿಕೆ ನಿವಾಸಿ ಕೃತೇಶ್ ಅವರ ಪತ್ನಿ, ಸಿ.ರಂಜಿತಾ ಕುವಾರಿ(30) ಆತ್ಮಹತ್ಯೆ ಪ್ರಕರಣ ನಿಗೂಢವಾಗಿದ್ದು, ರಂಜಿತಾ ಜತೆ ನಿಕಟ ಸಂಪರ್ಕ ಹೊಂದಿದ್ದ ವಕೀಲರೊಬ್ಬರು ತಲೆಮರೆಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಂಜಿತಾ ಕುವಾರಿ ಸಾವಿನ ನಂತರ ಈತ ರೈಲಿನ ಮೂಲಕ ಪರಾರಿಯಾಗಿದ್ದಾರೆ ಎನ್ನಲಾಗಿದೆ. ವಕೀಲೆ ಆತ್ಮಹತ್ಯೆಗೂ ಮೊದಲು ಅವರ ಮೊಬೈಲ್‌ಗೆ ಈತ ವಿಡಿಯೋ ಕರೆ ವಾಡಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದು, ಈ ನಿಟ್ಟಿನಲ್ಲಿ ಸಮಗ್ರ ತನಿಖೆೆ ನಡೆಸಲು ಮೊಬೈಲನ್ನು ತಿರುವನಂತಪುರ ಕೇಂದ್ರ ಫಾರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ. ರಂಜಿತಾ ಕುವಾರಿ ಮೃತದೇಹ ಕುಂಬಳೆಯಲ್ಲಿರುವ ತನ್ನ ಕಚೇರಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸನಿಹದಲ್ಲಿ ‘ಸಾಯುತ್ತೇನೆ’ ಎಂಬ ಒಕ್ಕಣೆಯುಳ್ಳ ಪತ್ರವೂ ಪೊಲೀಸರಿಗೆ ಲಭಿಸಿತ್ತು. ಕಾಸರಗೋಡಿನಲ್ಲಿ ವಕೀಲೆಯಾಗಿದ್ದ ಈಕೆ, ಪ್ರಜಾಪ್ರಭುತ್ವವಾದಿ ಮಹಿಳಾ ಅಸೋಸಿಯೇಶನ್ ಕುಂಬಳೆ ಏರಿಯಾ ಸಮಿತಿ ಸದಸ್ಯೆ, ಗ್ರಾಮ ಸಮಿತಿ ಕಾರ್ಯದರ್ಶಿ, ಡಿವೈಎಫ್‌ಐ ಬ್ಲಾಕ್ ಟಕ ಕೋಶಾಧಿಕಾರಿಯಾಗಿದ್ದರು.