ವಿಷ ಸೇವಿಸಿ ಆಸ್ಪತ್ರೆ ಸೇರಿದ್ದಾತ ಮೃತ್ಯು

ism
Published on

ಪುತ್ತೂರು ಗ್ರಾವಾಂತರ: ವಾರದ ಹಿಂದೆ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿಸಲ್ಪಟ್ಟಿದ್ದ ಕೆದಂಬಾಡಿ ಗ್ರಾಮದ ಸಾರಪುಣಿ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕೆದಂಬಾಡಿ ಗ್ರಾಮದ ಸಾರಪುಣಿ ನಿವಾಸಿ ಯೋಗೀಶ್(33) ಮೃತಪಟ್ಟವರು. ಯೋಗೀಶ್ ಸಾವಾಜಿಕ ಜಾಲತಾಣಗಳಲ್ಲಿ ತುಳು ರೀಲ್ಸ್ ಮೂಲಕ ಗುರುತಿಸಿಕೊಂಡಿದ್ದರು. ಸೆ.25ರಂದು ಮನೆಯಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಯೋಗೀಶ್ ವಿಷ ಸೇವಿಸುವ ಮುನ್ನ ಮನೆಯಲ್ಲಿ ‘ನಾನು ನಂಬಿಕೊಂಡವರೇ ನನ್ನ ಜತೆ ಸರಿಯಾಗಿ ಇಲ್ಲದ ಕಾರಣ ಬದುಕಲು ಸಾಧ್ಯವಾಗುತ್ತಿಲ್ಲ’ ಎಂಬ ಉಲ್ಲೇಖಿಸಿ ಡೆತ್‌ನೋಟ್ ಬರೆದಿಟ್ಟಿದ್ದರೆನ್ನಲಾಗಿದೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net